Header Ads
Header Ads
Breaking News

ಬಂಟ್ವಾಳ: ಗ್ರಾಮ ಪಂಚಾಯತ್ ಕಚೇರಿಗೆ ನುಗ್ಗಿ ಕಳವು.

ಬಂಟ್ವಾಳ: ಗ್ರಾಮ ಪಂಚಾಯತ್ ಕಚೇರಿಗೆ ನುಗ್ಗಿ ಕಳವು ಮಾಡಿದ ಅಪರೂಪದ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಂಗಿಪೇಟೆ ಯಲ್ಲಿ ನಡೆದಿದೆ.ಬಂಟ್ವಾಳ ತಾಲೂಕಿನ ಮಂಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪರಂಗಿಪೇಟೆ ಪೇಟೆಯ ಹಳೆಯ ರಸ್ತೆಯಲ್ಲಿ ರುವ ಪುದು ಗ್ರಾಮ ಪಂಚಾಯತ್ ಕಚೇರಿಯ ಬೀಗ ಮುರಿದು ಗ್ರಾಮ ಕರಣೀಕರ ಕಚೇರಿ ಯಲ್ಲಿದ್ದ ಕಪಾಟಿನ ಬೀಗ ಮುರಿದು ಅದರಲ್ಲಿದ್ದ ಸುಮಾರು ೧ ಲಕ್ಷ ಹಣವನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಸಿ.ಐ.ಟಿ.ಡಿ.ನಾಗರಾಜ್, ಗ್ರಾಮಾಂತರ ಠಾಣಾ ಎಸ್ .ಐ.ಪ್ರಸನ್ನ ಕುಮಾರ್ ಸಿಬ್ಬಂದಿ ಸುರೇಶ್, ಜಯರಾಮ್ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಶ್ವಾನ ದಳ ಬೆರಳಚ್ಚು ತಜ್ಞರು ಬೇಟಿ ನೀಡಿ ಸ್ಥಳ ಪರೀಕ್ಷೆ ನಡೆಸಿದರು.

Related posts

Leave a Reply