Header Ads
Header Ads
Breaking News

ಬಂಟ್ವಾಳ: ಜಗದೀಶ್‌ಚಂದ್ರ ನಿಂಬಳ್ಕರ್ ವರ್ಗಾವಣೆ ವಿರೋಧಿಸಿ ಧರಣಿ ಸತ್ಯಾಗ್ರಹ

ಪಂಚಾಯತ್‌ರಾಜ್ ಇಂಜಿನಿಯರಿಂಗ್ ಬಂಟ್ವಾಳ ಉಪವಿಭಾಗದ ಕಿರಿಯ ಎಂಜಿನಿಯರ್ ಜಗದೀಶ್‌ಚಂದ್ರ ನಿಂಬಳ್ಕರ್ ಅವರನ್ನು ಏಕಾಏಕಿ ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಬಂಟ್ವಾಳದಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.

ಕಿರಿಯ ಎಂಜನಿಯರ್ ಜಗದೀಶ್ ಚಂದ್ರ ಅವರನ್ನು ಡಿಸೆಂಬರ್ ತಿಂಗಳಿನಲ್ಲಿ ಏಕಾಏಕಿ ವರ್ಗಾವಣೆಗೊಳಿಸಿರುವುದರಿಂದ ಸಂಗಬೆಟ್ಟು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾಮಗಾರಿ ಕುಂಠಿತಗೊಂಡಿದೆ. ಮುಂದಿನ ಮಾರ್ಚ್ ತಿಂಗಳವರೆಗೆ ಈ ಅಧಿಕಾರಿಯನ್ನು ಇಲ್ಲೇ ಉಳಿಸಿಕೊಳ್ಳಬೇಕು ಎಂದು ತುಂಗಪ್ಪ ಬಂಗೇರಾ ಆಗ್ರಹಿಸಿದರು. ಸಂಗಬೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿನ ಎಲ್ಲಾ ಅಭಿವೃದ್ದಿ ಕಾಮಗಾರಿಗಳನ್ನು ಇನ್ನೋರ್ವ ಎಂಜಿನಿಯರ್ ಮೂಲಕ ಮಾಡಿಸುವುದಾಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ನರೆಂದ್ರ ಬಾಬು ಅವರು ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದರೂ ಕೂಡ ಒಪ್ಪದ ಪ್ರತಿಭಟನಾಕಾರರು ಇಂದು ಸಂಜೆಯೊಳಗೆ ವರ್ಗಾವಣೆಗೊಳಿಸರುವ ಅಧಿಕಾರಿಯನ್ನು ಮರಳಿ ಸ್ವಸ್ಥಾನಕ್ಕೆ ಕರೆಸಿಕೊಂಡು ಕರ್ತವ್ಯದಲ್ಲಿ ಮುಂದುವರೆಸಬೇಕು, ತಪ್ಪಿದ್ದಲ್ಲಿ ನಾಳೆಯಿಂದ ಅರೆಬೆತ್ತಲೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭ ಬಿಜೆಪಿ ಮುಖಂಡರಾದ ರಾಮದಾಸ ಬಂಟ್ವಾಳ, ದಿನೇಶ್ ಅಮ್ಟೂರು, ಪ್ರವೀಣ್ ತುಂಬೆ, ಸಂಜೀವ ಪೂಜಾರಿ, ಪೂವಪ್ಪ ಮೆಂಡನ್, ರಾಮಚಂದ್ರ ಕರೆಂಕಿ, ಸಂತೋಷ್ ರಾಯಿ, ಗೋಪಾಲಸುವರ್ಣ, ಲಕ್ಷ್ಮೀನಾರಾಯಣ ಗೌಡ ಮತ್ತಿತರರು ಹಾಜರಿದ್ದರು.

Related posts

Leave a Reply