
ಬಂಟ್ವಾಳ ಪೇಟೆಯಲ್ಲಿರುವ ಪ್ರಸಿದ್ದ ದೈವ ಕ್ಷೇತ್ರ ನಂದನ ಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವ ಎಪ್ರಿಲ್ 1 ರಂದು ಆರಂಭಗೊಂಡಿದ್ದು ಎಪ್ರಿಲ್ 3 ರವರೆಗೆ ನಡೆಯಲಿದೆ.
ಬೆಳಿಗ್ಗೆ ಗಣಹೋಮ, ನಾಗತಂಬಿಲ, ನವಕ ಕಲಶಾಭಿಷೇಕ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಅರಸು ದೈವಕ್ಕೆ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭ ವಿವಿಧ ಮನೆತನಗಳ ಪ್ರಮುಖರಾದ ಗಣೇಶ್ ಸುವರ್ಣ ತುಂಬೆ, ವಿಶ್ವನಾಥ ಪೊನ್ನಂಗಿಲ ಗುತ್ತು, ಲೋಕೇಶ್ ಬಂಗೇರ, ಲೋಕನಾಥ್ ಬಡಕೊಟ್ಟು ಮೊದಲಾದವರು ಉಪಸ್ಥಿತರಿದ್ದರು. ಶುಕ್ರವಾರ ಶ್ರೀ ಜುಮಾದಿ ಬಂಟ ದೈವ ಹಾಗೂ ಶನಿವಾರ ಶ್ರೀ ವೈದ್ಯನಾಥ ದೈವಕ್ಕೆ ಕಾಲಾವಾಧಿ ನೇಮೋತ್ಸವ ಹಾಗೂ ಕಂಚಿಲ ಸೇವೆ ನಡೆಯಲಿದೆ. ಎಪ್ರಿಲ್ 4 ಆದಿತ್ಯವಾರ ಶ್ರೀ ವೈದ್ಯನಾಥ ದೈವಕ್ಕೆ ಹರಕೆಯ ನೇಮೋತ್ಸವ ನಡೆಯಲಿದೆ.