Header Ads
Breaking News

ಬಂಟ್ವಾಳ ತಾಲೂಕಲ್ಲೂ ವ್ಯಾಪಕ ಮಳೆ

ಕರಾವಳಿಯಲ್ಲಿ ಹವಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಗಾರು ಮಳೆ ಚುರುಕುಗೊಂಡಿದೆ. ಹಾಗೆಯೇ ಬಂಟ್ವಾಳ ತಾಲೂಕಲ್ಲೂ ಮಳೆ ಶುರುವಾಗಿದ್ದು, ಯಾವ ಭಾಗದಲ್ಲಿ ಎಷ್ಟು ಮಳೆಯಾಗಿದೆ ಎಂಬ ನಿಖರ ಲೆಕ್ಕಾಚಾರ ಪಡೆಯಲು ತಾಲೂಕಿನಲ್ಲಿ ಮಳೆ ಮಾಪನ ಕೇಂದ್ರ ಇಲ್ಲ.ಸರಾಸರಿಯಾಗಿ ದಿನವೊಂದಕ್ಕೆ ಎಷ್ಟು ಪ್ರಮಾಣದಲ್ಲಿ ಮಳೆ ಬಿದ್ದಿದೆ ಎಂಬ ನಿಖರವಾದ ಮಾಹಿತಿ ಮಳೆ ಮಾಪನದಿಂದ ಮಾತ್ರ ದೊರಕಲು ಸಾಧ್ಯ ಆದರೆ ಬಂಟ್ವಾಳ ತಾಲೂಕಿನ ಕೇಂದ್ರ ಬಿಂದುವಾಗಿರುವ ಬಿ.ಸಿ.ರೋಡ್‌ನಲ್ಲಿ ಮಳೆ ಮಾಪನ ಕೇಂದ್ರವೇ ಇಲ್ಲವಾಗಿದ್ದು, ಮಳೆಯ ಪ್ರಮಾಣದ ಕುರಿತು ಸ್ಪಷ್ಟ ಮಾಹಿತಿ ಸಿಗದೆ ಅಧಿಕಾರಿಗಳು ನೀಡುವ ಅಂಕಿ ಅಂಶದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ.ಬಂಟ್ವಾಳ , ಪಾಣೆಮಂಗಳೂರು ಹೋಬಳಿ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗಳಿಗೆ ಸಂಬಂಧಿಸಿ ವಿಟ್ಲದ ಸಿಪಿಸಿಆರ್‌ಐ ಮಳೆ ಮಾಪನ ಕೇಂದ್ರ, ಮಾಣಿ ಹೆಲ್ತ್ ಸೆಂಟರ್, ರಾಯಿ ಹೆಲ್ತ್ ಸೆಂಟರ್, ಸಂಗಬೆಟ್ಟು, ಕಾವಳಕಟ್ಟೆ, ಪುದು ಹಾಗೂ ಬಿ.ಸಿ.ರೋಡ್ ಹಳೆ ತಾಲೂಕು ಕೇಂದ್ರ ಹೀಗೆ ಒಟ್ಟು7ಕಡೆಗಳಲ್ಲಿ ಮಳೆ ಮಾಪನ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಈ ಪೈಕಿ ಬಿ.ಸಿ.ರೋಡ್‌ನಲ್ಲಿ ಅಳವಡಿಸಲಾಗಿದ್ದ ಮಳೆ ಮಾಪನ ಕೇಂದ್ರ ಮಾತ್ರ ಕಾಣಿಸ್ತಾ ಇಲ್ಲ ಎಂಬ ದೂರಿದೆ.ಈ ಮೊದಲು ಬಿ.ಸಿ.ರೋಡ್‌ನಲ್ಲಿ ಕಾರ್ಯಾಚರಿಸುತಿದ್ದ ತಾಲೂಕು ಪಂಚಾಯತ್ ನ ಹಳೆ ಕಟ್ಟಡದಲ್ಲಿ ಮಳೆ ಮಾಪನ ಕೇಂದ್ರದಿಂದಲೇ ಮಳೆಯ ಬಗ್ಗೆ ನಿಖರ ಮಾಹಿತಿಯು ತಾಲೂಕಿನ ರೈತರಿಗೆ ರವಾನೆಯಾಗುತ್ತಿತ್ತು. ಇಲ್ಲಿ ಪಿಪಿಪಿ ಮಾದರಿಯ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ತಾಲೂಕು ಪಂಚಾಯತ್ ಹಳೆ ಕಟ್ಟಡವನ್ನು ಕೆಡವಲಾಗಿದ್ದು ಮಳೆ ಮಾಪನ ಕೇಂದ್ರವು ಕೂಡಾ ನೆಲಸಮವಾಗಿದೆ.

 

ಹಳೆ ತಾಲೂಕು ಪಂಚಾಯತ್ ಕಟ್ಟಡವನ್ನು ಕೆಡವಿದ್ದರಿಂದ ಇಲ್ಲಿ ಕಾರ್ಯಾಚರಿಸುತ್ತಿದ್ದ ಎಲ್ಲಾ ಇಲಾಖಾ ಕಚೇರಿಗಳನ್ನು ನೂತನ ಮಿನಿವಿಧಾನಸೌಧದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈ ಕಟ್ಟಡದಲ್ಲಿ ಎಲ್ಲ ವ್ಯವಸ್ಥೆಗಳಿದ್ದರೂ ಮಳೆ ಮಾಪನ ಕೇಂದ್ರದ ಬಗ್ಗೆ ಯಾರೂ ಗಮನ ಹರಿಸಿಲ್ಲ.ಮಳೆ ಮಾಪನ ಕೇಂದ್ರವನ್ನು ಈಗಿರುವ ನೂತನ ಮಿನಿವಿಧಾನ ಸೌಧದಲ್ಲಿಯೇ ನಿರ್ಮಿಸಿ ಕೊಡುವ ಕುರಿತಂತೆ ಯೋಜನೆಯಲ್ಲಿ ಕೂಡ ರೂಪಿಸಲಾಗಿತ್ತು ಎಂದು ಹೇಳಲಾಗಿದೆ.ಆದರೆ ಮಿನಿವಿಧಾನ ಸೌಧದಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪಿಸಲು ಇಲ್ಲಿನ ಅಧಿಕಾರಿಗಳು ಯಾವುದೇ ಆಸಕ್ತಿ ತೋರಿದಂತಿಲ್ಲ ಎಂದು ಹೇಳಲಾಗುತ್ತಿದೆಮಿನಿವಿಧಾನ ಸೌಧದಲ್ಲಿ ಮಳೆ ಮಾಪನ ಕೇಂದ್ರ ನಿರ್ಮಿಸುವಂತೆ ಅಂದಿನ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದೆವು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ಅವರು ಪಿಡಬ್ಲ್ಯೂಡಿ ಇಲಾಖೆಗೆ ಮಾಹಿತಿ ನೀಡಿದ್ದರು. ಪಿಡಬ್ಲ್ಯೂಡಿ ಇಲಾಖೆಯು ಮಳೆ ಮಾಪನ ಕೇಂದ್ರದ ನಿರ್ಮಾಣಕ್ಕಾಗಿ ಸುಮಾರು 1.50ಲಕ್ಷ ರೂ. ಅಂದಾಜು ಪಟ್ಟಿ ನೀಡಿದ್ದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಮುಂದಿನ ಕ್ರಮವನ್ನು ತೆಗೆದು ಗೊಂಡಿಲ್ಲ. ಹಾಗಾಗಿ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಸುರಿಯಬಹುದಾದ ಸರಾಸರಿ ಮಳೆಯ ಪ್ರಮಾಣದ ನಿಖರ ಮಾಹಿತಿ ಸಿಗುವುದು ಕಷ್ಟ ಕೇಂದ್ರವನ್ನು ನಿರ್ಮಿಸುವ ಮೂಲಕ ಮಳೆಯ ಬಗ್ಗೆ ನಿಖರ ಮಾಹಿತಿ ನೀಡಬೇಕಂಬುದು ರೈತರ ಬೇಡಿಕೆ.

Related posts

Leave a Reply