Header Ads
Breaking News

ಬಂಟ್ವಾಳ ತಾಲೂಕಿನಲ್ಲಿ ಗಾಳಿ ಮಳೆಗೆ ವ್ಯಾಪಕ ಹಾನಿ

ಬಂಟ್ವಾಳ: ಸೋಮವಾರ ರಾತ್ರಿ ಸುರಿದ ಸಿಡಿಲು ಗಾಳಿ ಮಳೆಗೆ ತಾಲೂಕು ವ್ಯಾಪ್ತಿಯ ಕೆಲೆವಡೆ ವ್ಯಾಪಕ ಹಾನಿ ಉಂಟಾಗಿ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿದೆ.

ಬಿ. ಮೂಡ ಗ್ರಾಮದ ಕಾಮಾಜೆ ಹಾಗೂ ನರಿಕೊಂಬು ಗ್ರಾಮ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮನೆಗಳಿಗೆ ಹಾನಿ ಉಂಟಾಗಿರುವುದು ವರದಿಯಾಗಿದೆ. ಗಾಳಿಯ ರಭಸಕ್ಕೆ ತೆಂಗಿನ ಮರಗಳು ಉರುಳಿ ಬಿದ್ದಿದೆ. ಮರದ ದೊಡ್ಡ ಗೆಲ್ಲುಗಳು, ವಿದ್ಯುತ್ ಕಂಬಗಳು ಧರಶಾಹಿಯಾಗಿವೆ. ಮನೆಯ ಛಾವಣಿಗಳು ಹಾರಿ ಹೋಗಿವೆ. ಸಿಡಿಲಿನ ಬಡಿತಕ್ಕೆ ವಿದ್ಯುತ್ ಪರಿಕರಗಳು ಹಾನಿಗೀಡಾಗಿವೆ. ಘಟನಾ ಸ್ಥಳಕ್ಕೆ ಕಂದಾಯಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರದ ಗೆಲ್ಲುಗಳನ್ನು ತೆರವುಗೊಳಿಸುವ ಹಾಗೂ ವಿದ್ಯುತ್ ಕಂಬಗಳನ್ನು ಬದಲಿಸುವ ಕಾರ್ಯ ಮಂಗಳವಾರ ಬೆಳಿಗ್ಗೆ ನಡೆಯಿತು.

Related posts

Leave a Reply

Your email address will not be published. Required fields are marked *