Header Ads
Breaking News

ಬಂಟ್ವಾಳ ತಾಲೂಕಿನಲ್ಲಿ ಜನಜೀವನ ಸಹಜ ಸ್ಥಿತಿಗೆ : ಇಂಟರ್‌ನೆಟ್ ಸ್ಥಗಿತಗೊಳಿಸಿದ್ದರಿಂದ ಸರ್ಕಾರಿ ಕಚೇರಿಗಳು ತೆರೆದಿಲ್ಲ ಜನ ಸಂಚಾರ ವಿರಳದಿಂದಾಗಿ ಕಚೇರಿಗಳು ಖಾಲಿ

ಬಂಟ್ವಾಳ: ಮಂಗಳೂರು ಗಲಭೆಯ ಬಳಿಕ ಸ್ಥಬ್ದವಾಗಿದ್ದ ಬಂಟ್ವಾಳ ತಾಲೂಕಿನಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಶುಕ್ರವಾರದ ಪರಿಸ್ಥಿತಿ ಗಿಂತ ಸ್ವಲ್ಪ ಚೇತರಿಕೆ ಕಂಡಿರುವ ನಗರ ಪ್ರದೇಶದಲ್ಲಿ ಜನರು ಹಾಗೂ ವಾಹನಗಳ ಓಡಾಟ ಕಂಡು ಬಂದಿದೆ. ರಿಕ್ಷಾ ಹಾಗೂ ಅಟೋ ಸ್ಟಾಂಡ್ ಗಳು ಎಂದಿನಂತೆ ಇವೆ. ಸರ್ವಿಸ್ ಹಾಗೂ ಖಾಸಗಿ ಬಸ್ಸುಗಳ ಓಡಾಟ ಇಲ್ಲದೆ ಜನರು ಪರದಾಡುವಂತಾಗಿದೆ. ಬೆರಳೆಣಿಕೆಯ ಅಂಗಡಿಗಳು ಮಾತ್ರ ಸ್ವಯಂ ಬಂದ್ ಆಚರಿಸಿದರೆ ಹೆಚ್ಚಿನ ಅಂಗಡಿಗಳು ಬಾಗಿಲು ತೆರೆದಿವೆ. ಇಂಟರ್ ನೆಟ್ ಸ್ಥಗಿತಗೊಳಿಸಿರುವುದರಿಂದ ಸರ್ಕಾರಿ ಕಚೇರಿಗಳು ತೆರೆದಿದ್ದರೂ ಸೇವೆಗಳು ಲಭ್ಯವಾಗುತ್ತಿಲ್ಲ. ಜನ ಸಂಚಾರ ವಿರಳದಿಂದಾಗಿ ಕಚೇರಿಗಳು ಖಾಲಿಯಾಗಿವೆ.

Related posts

Leave a Reply

Your email address will not be published. Required fields are marked *