Header Ads
Header Ads
Header Ads
Breaking News

ಬಂಟ್ವಾಳ ತಾಲೂಕಿನ ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವದ ಸಮಾರೋಪ ಸಮಾರಂಭ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ಶತಮಾನೋತ್ಸವದ ಸಮಾರೋಪ ಸಮಾರಂಭ ಹಾಗೂ ವಿದ್ಯಾ ಕೇಂದ್ರಗಳಿಗೆ ಕೊಡುಗೆ ವಿತರಣೆ, ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಸಮಾಜದ ಕಟ್ಟ ಕಡೆಯ ರೈತನ ಏಳಿಗೆಗಾಗಿ ಸಹಕಾರಿ ಸಂಘಗಳು ಹುಟ್ಟಿಕೊಂಡವು. ವ್ಯಕ್ತಿ ಜೀವನದಲ್ಲಿ ಸಹಕಾರಿ ಸಂಘ ಅವಿಭಾಜ್ಯ ಅಂಗವಾಗಿದೆ. ಪ್ರಾಕೃತಿಕ ವಿಕೋಪಗಳಿಂದ ರೈತನ ಬದುಕು ಗೊಂದಲಮಯವಾಗಿದೆ. ಜನರ ಬೇಡಿಕೆಗಳನ್ನು ಪೂರೈಸುವ ಕಾರ್ಯವನ್ನು ಸಂಘ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಟಿ. ಜಿ. ರಾಜಾರಾಮ್ ಭಟ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಸಿಬ್ಬಂದಿಗಳು ಜನ ಸ್ನೇಹಿಗಳಾದಾಗ ಸಂಘ ಮುಂಚೂಣಿಗೆ ಬರುತ್ತದೆ. ಕೃಷಿಕರಿಗೆ ಸಮಗ್ರ ಮಾಹಿತಿ ನೀಡುವ ಜತೆಗೆ ಬೆಳೆಗಳಿಗೆ ನ್ಯಾಯ ಒದಗಿಸುವ ಕಾರ್ಯ ಸಹಕಾರಿ ಮಾಡುತ್ತಿದೆ. ಸರ್ಕಾರ ನೀಡುವ ಸೌಲಭ್ಯಗಳು ಸಹಕಾರಿ ಸಂಘಗಳ ಮೂಲಕ ನಡೆದಾಗ ಗ್ರಾಮಗಳು ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು.

ಟಿ. ಜಿ. ರಾಜಾರಾಮ್ ಭಟ್, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ಪ್ರತಿಭಾನ್ವಿತರಿಗೆ ಪುರಸ್ಕಾರ, ಸಂಘದ ಹಿರಿಯ ನೂರು ಮಂದಿ ಸದಸ್ಯರಿಗೆ ಗೌರವಾರ್ಪಣೆ, ಆಡಳಿತ ಮಂಡಳಿ- ಸಿಬ್ಬಂದಿ ವರ್ಗಕ್ಕೆ ಗೌರವಾರ್ಪಣೆ, ಇಂಜಿನಿಯರ್ ಹಾಗೂ ಕುಶಲಕರ್ಮಿಗಳಿಗೆ ಅಭಿನಂದನೆ ನಡೆಯಿತು. ಶಿಕ್ಷಣ ಸಂಸ್ಥೆಗಳಿಗೆ ವಿವಿಧ ಕೊಡುಗೆಗಳನ್ನು ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯಿತಿ ಸದಸ್ಯ ಹಾಜಿ ಆದಂ ಕುಂಞ ಬಾಯಬೆ, ಸಹಕಾರಿ ಅಭಿವೃದ್ಧಿ ಅಧಿಕಾರಿ ತ್ರೀವೇಣಿ ರಾವ್, ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಭಟ್, ಗ್ರಾಮ ಪಂಚಾಯಿತಿ ಅಣ್ಣಪ್ಪ ಕುಲಾಲ್ ಪೇರಮೊಗ್ರು, ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ಯೋಗೀಶ್ ಎಚ್. ಮಾಜಿ ಕಾರ್ಯದರ್ಶಿ ಕೆ. ದೇವಪ್ಪ ಗೌಡ ಕುದುಮಾನು, ಶತಮಾನೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ಟ ಬಡೆಕ್ಕಿಲ, ಉಪಾಧ್ಯಕ್ಷ ಮುರಳೀಧರ ಕೆ. ಶೆಟ್ಟಿ ಕಲ್ಲಾಜೆ, ಜೆ. ಭೀಮ ಭಟ್ಟ ಮೀರಾವನ, ಸ್ವಾಗತ ಸಮಿತಿ ಸಂಚಾಲಕ ಬಾಲಪ್ಪ ಗೌಡ ಕುದುಂಬ್ಲಾಡಿ, ಆಡಳಿತ ಮಂಡಳಿ ನಿರ್ದೇಶಕರಾದ ಜೆ. ಕೃಷ್ಣ ಭಟ್ಟ ಮೀರಾವನ, ಪ್ರವೀಣ ರೈ ಕಲ್ಲಾಜೆ, ಮುಖ್ಯ ಕಾರ್ಯನಿರ್ವಣಾಧಿಕಾರಿ ಕೇಶವ ಗೌಡ ಕಾಂತುಕೋಡಿ, ಮುಖ್ಯಕಾರ್ಯನಿರ್ವಹಣಾಕಾರಿ ಕೇಶವ ಗೌಡ ಕೆ, ಶ್ಯಾಮಪ್ರಸಾದ ಪುಂಜತ್ತೋಡಿ, ಕೇಶವ ನಾಯ್ಕ ಬಡೆಕ್ಕಿಲ, ಧರ್ನಪ್ಪ ಗೌಡ ವಾಲ್ತಾಜೆ, ಜಿ. ಮಹಮ್ಮದ್ ಗಾಂಧಿನಗರ, ಅರುಣ ವಾಲ್ತಾಜೆ, ಬೆನ್ನಿ ಲಸ್ರಾದೋ ಕರಿಮಜಲು, ಕಾಂತುಕೋಡಿ, ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ಗೌಡ ಕುಂದುಮಾನ್, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *