Header Ads
Header Ads
Breaking News

ಬಂಟ್ವಾಳ ತಾಲೂಕು ಪಂಚಾಯತ್ ವಿಶೇಷ ಸಾಮಾನ್ಯ ಸಭೆ : ಸಭೆಯಲ್ಲಿ ಸದಸ್ಯರ ಪರ ವಿರೋಧದ ಚರ್ಚೆ

ಬಂಟ್ವಾಳ: ಬಿ.ಸಿ.ರೋಡಿನ ವಕೀಲರೊಬ್ಬರು ತಾಪಂ ಜಾಗದಲ್ಲಿ ಕಂಪೌಂಡನ್ನು ಕೆಡವಿ ಅತಿಕ್ರಮಣ ಮಾಡಿರುವ ಕುರಿತು ತಾಪಂ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರಲ್ಲಿ ಪರ, ವಿರೋಧ ಚರ್ಚೆ ಪರಸ್ಪರ ಜಟಾಪಟಿಗೆ ಕಾರಣವಾಯಿತು.

ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ತಾಪಂ ಜಾಗದ ಆವರಣಗೋಡೆಯನ್ನು ಕಾಮಗಾರಿಯ ಹಿನ್ನಲೆಯಲ್ಲಿ ಮೌಖಿಕ ಅನುಮತಿಯನ್ನು ಪಡೆದು ಕೆಡವಿದ್ದರು. ಇದೀಗ ಆ ಜಾಗದಲ್ಲಿ ಕಾಲುದಾರಿ ನಿರ್ಮಿಸಿ ಗೇಟ್ ಅಳವಡಿಸಿ ಸಮಸ್ಯೆಯನ್ನುಂಟು ಮಾಡಿದ್ದಾರೆ. ಈ ಕುರಿತು ಒಮ್ಮತದ ತೀರ್ಮಾನ ಹಾಗೂ ಕಾನೂನು ಕ್ರಮ ಜರಗಿಸುವ ಕುರಿತು ಈ ವಿಶೇಷ ಸಭೆ ಕರೆಯಲಾಗಿದೆ ಎಂದು ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭೆಯಲ್ಲಿ ಪ್ರಸ್ತಾವಿಸಿದರು. ಈ ಸಂದರ್ಭ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಪ್ರತಿಕ್ರಿಯಿಸಿ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರ ಮನವಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರ ಸೂಚನಾಪತ್ರವನ್ನು ಸಭೆಯಲ್ಲಿ ವಾಚಿಸಿದರು. ಅತಿಕ್ರಮಣ ತೆರವುಗೊಳಿಸುವ ಸಂದರ್ಭದಲ್ಲಿ ಏಕರೀತಿ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಸದಸ್ಯ ಪ್ರಭಾಕರ ಪ್ರಭು ಸಭೆಯ ಗಮನ ಸೆಳೆದರು.
ಸದಸ್ಯರ ಅಭಿಪ್ರಾಯವನ್ನು ಆಲಿಸಿದ ಬಳಿಕ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ತಾಪಂ ವ್ಯಾಪ್ತಿಯಲ್ಲಿ ಅತಿಕ್ರಮಣಗೊಂಡಿರುವ ಜಾಗವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಶುಕ್ರವಾರದಿಂದಲೇ ಸರ್ವೇ ಮಾಡುವುದು, ತಾಪಂ ವ್ಯಾಪ್ತಿಯ ಕೆಲ ಜಾಗವು ಪುರಸಭಾ ವ್ಯಾಪ್ತಿಯಲ್ಲಿ ಬರುವ ಜಾಗವನೂ ಸರ್ವೇ ಮಾಡುವುದು, ಆವರಣಗೋಡೆ ನಿರ್ಮಿಸಿ ತಾಪಂ ಅಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಲ್ಲದೆ ಅತಿಕ್ರಮಣವನ್ನು ತೆರವುಗೊಳಿಸುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವುದೆಂದು ರೂಲಿಂಗ್ ಪ್ರಕಟಿಸಿದರು.
ಈ ಸಂದರ್ಭ ಉಪಾಧ್ಯಕ್ಷ ಆಬ್ಬಾಸ್ ಆಲಿ, ತಹಶೀಲ್ದಾರ್ ರಶ್ಮಿ ಎಸ್.ಆರ್., ಸಿಐ ಟಿ.ಡಿ.ನಾಗರಾಜ್, ಇಒ ರಾಜಣ್ಣ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *