Header Ads
Header Ads
Breaking News

ಬಂಟ್ವಾಳ ತಾಲೂಕು ಮಟ್ಟದ ನಾಟಕ ಸ್ಪರ್ಧೆ : ಅರುಣ್‌ಚಂದ್ರ ಬಿ.ಸಿ ರೋಡ್ ತಂಡಕ್ಕೆ ಪ್ರಥಮ ಬಹುಮಾನ

ಬಂಟ್ವಾಳ ತಾಲೂಕು ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅರುಣ್‌ಚಂದ್ರ ಬಿ.ಸಿ ರೋಡ್ ಅವರು ನಟಿಸಿ ನಿರ್ದೇಶಿಸಿದ ಸೇಲೆ ಸುಂದರೆ ನಾಟಕವು ಬಂಟ್ವಾಳದಲ್ಲಿ ನಡೆದ ಚಿಣ್ಣರ ಕಲೋತ್ಸವ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.

ರಂಗಭೂಮಿ ತಂಡ ಬಿ.ಸಿ ರೋಡ್‌ನ ಕಲಾವಿದರು ದೇಶ ವಿದೇಶದಲ್ಲೂ ನಾಟಕ ಪ್ರದರ್ಶನವನ್ನು ನೀಡಿ ಜನಮಾನಸದಲ್ಲಿ ಹೆಮ್ಮೆಯ ತಂಡವಾಗಿ ಮೂಡಿಬಂದಿದ್ದಾರೆ. ಈಗಾಗಲೇ ವಿ4 ನ್ಯೂಸ್ ವತಿಯಿಂದ ನಡೆಯುತ್ತಿರುವ ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಜನರನ್ನು ನಕ್ಕು ನಗಿಸಿ ಹೊಟ್ಟೆ ಹುಣ್ಣಾಗಿಸಿದ್ದು ಈ ತಂಡದ ಕೆಲವು ಕಲಾವಿದರೆ. ಇದೀಗ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಚಿಣ್ಣರ ಲೋಕ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಬಂಟ್ವಾಳದಲ್ಲಿ ನಡೆದ ತಾಲೂಕು ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಅರುಣ್ ಚಂದ್ರ ಬಿ.ಸಿ ರೋಡ್ ನಟಿಸಿ ನಿರ್ದೇಶಿಸಿದ ಸೇಲೆ ಸುಂದರೆ ನಾಟಕ ಪ್ರಥಮ ಬಹುಮಾನ ಗಳಿಸಿದ್ದು ಹೆಮ್ಮೆಯ ವಿಚಾರ. ಅಷ್ಟುಮಾತ್ರವಲ್ಲದೆ ಅರುಣ್ ಚಂದ್ರ ಅವರು ಉತ್ತಮ ಹಾಸ್ಯನಟ ಮತ್ತು ಉತ್ತಮ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಪೋಷಕ ನಟರಾಗಿ ವಿನಾಯಕ್ ಜೆಪ್ಪು, ಉತ್ತಮ ಸಹ ಹಾಸ್ಯನಟ ಸಂದೀಪ್ ಶೆಟ್ಟಿ ರಾಯಿ, ಉತ್ತಮ ಪೋಷಕ ನಟಿ ಉಷಾ ದೇವರಾಜ್ ಉತ್ತಮ ನಿರ್ವಹಣೆಯನ್ನು ರಂಗಭೂಮಿ ತಂಡ ಬಿ.ಸಿ ರೋಡ್ ಪಡೆದುಕೊಂಡಿದೆ.

ಈಗಾಗಲೇ ವಿ೪ ನ್ಯೂಸ್‌ನಲ್ಲಿ ಪ್ರಸಾರವಾಗುವ ಮನೆಮಾತಾಗಿರುವ ಕಾರ್ಯಕ್ರಮ ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿದ ಕೆಲವು ತಂಡಗಳ ಕಲಾವಿದರು ರಂಗಭೂಮಿ ಬಿ.ಸಿ ರೋಡ್ ತಂಡದಲ್ಲಿರುವುದು ವಿಶೇಷ.

Related posts

Leave a Reply