Header Ads
Header Ads
Breaking News

ಬಂಟ್ವಾಳ ತಾಲೂಕು ಮಟ್ಟದ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ

ಬಂಟ್ವಾಳ: ಸೌತಡ್ಕ ಫರ್ನಿಚರ್ಸ್ ಬಂಟ್ವಾಳ ಇದರ ಆಶ್ರಯದಲ್ಲಿ ಬಂಟ್ವಾಳ ಫ್ರೆಂಡ್ಸ್ ಸಹಕಾರದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ಬಂಟ್ವಾಳ ತಾಲೂಕು ಮಟ್ಟದ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ ಬಂಟ್ವಾಳ ಬೈಪಾಸ್‌ನ ಸಮಾಜ ಸೇವಾಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕರಾಂ ಪೂಜಾರಿ ಮಾತನಾಡಿ ಇಂದಿನ ಸ್ಥಿತ್ಯಂತರ ಕಾಲಘಟ್ಟದಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಆದರೆ ಯಾಕೆ ಆಚರಿಸುತ್ತೇವೆ ಎನ್ನುವ ವಿವೇಚನೆ ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ, ಹಿಂದೆ ಹಬ್ಬಗಳ ಆಚರಣೆಗೆ ಅರ್ಥ ಇತ್ತು ಆದರೆ ಈಗ ಕೃತಕ ಬದುಕನ್ನು ಬದುಕುತ್ತಿದ್ದೇವೆ ಎಂದರು. ಮಾರುಕಟ್ಟೆಯಿಂಧ ಹಣ ಕೊಟ್ಟು ತರಕಾರಿ ತರುವ ಬದಲು ವಿಷವನ್ನು ಖರೀದಿ ಮಾಡಿ ತರುತ್ತಿದ್ದೇವೆ ಎಂದು ತಿಳಿಸಿದ ಅವರು ಯುವ ಸಮುದಾಯ ಪ್ರಜ್ಞಾವಂತರಾಗುವ ಅವಶ್ಯಕತೆ ಇದೆ. ಹಿರಿಯರಿಗೆ ಗೌರವ ನೀಡಿ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಬದುಕುವ ಪ್ರಯತ್ನ ಆಗಬೇಕು, ನಮ್ಮ ಬದುಕಿಗೆ ಅರ್ಥ ಸಿಗಬೇಕು ಎಂದರು.

ನಗರ ಠಾಣಾ ಎಸೈ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹೊಸತನ, ಕ್ರಿಯಾಶೀಲತೆ ಇದ್ದಾಗ ಯಾವುದೇ ಕಾರ್ಯಕ್ರಮಗಳು ಯಶಸ್ಸು ಸಾಧಿಸಲು ಸಾಧ್ಯ. ನಾವೇ ಸ್ವತಃ ಗೂಡುದೀಪ ತಯಾರಿಸಿ ಹಬ್ಬ ಆಚರಿಸಿದಾಗ ಸಿಗುವ ಸಂತೋಷ ವಿಶಿಷ್ಟವಾದುದು ಎಂದು ತಿಳಿಸಿದರು

ಕಾರ್ಯಕ್ರಮದ ರುವಾರಿ, ಸೌತಡ್ಕ ಫರ್ನಿವರ್ಸ್‌ನ ಮಾಲಕ ನಾಗೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್, ಉದ್ಯಮಿ ಸತೀಶ್ ಶೆಟ್ಟಿ, ಚಿತ್ರಕಲಾ ಶಿಕ್ಷಕ ಚೆನ್ನಕೇಶವ, ಚಿಲಿಪಿಲಿ ಗೊಂಬೆ ಬಳಗದ ಎಸ್.ಎನ್. ಹೊಳ್ಳ ಭಾಗವಹಿಸಿದ್ದರು. ಸುಕುಮಾರ್ ಬಂಟ್ವಾಳ,ಭಾಸ್ಕರ ನಿತ್ಯಾನಂದ ನಗರ, ಯೋಗೀಶ್ ಕೆಳಗಿನ ಮಂಡಾಡಿ, ಚೇತನ್ ಪೂಜಾರಿ ಸಹಕರಿಸಿದರು. ಬಂಟ್ವಾಳ ವಿಎನ್‌ಆರ್ ಗೋಲ್ಡ್ ನ ಮಾಲಕ ವಿ. ನಾಗೇಂದ್ರ ಬಾಳಿಗ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅನಿಲ್ ಮಂಡಾಡಿ, ಪ್ರವೀಣ್ ಅರ್ಬಿಗುಡ್ಡೆ,ಮಹಮ್ಮಾಯಿ ಫ್ರೆಂಡ್ಸ್ ಕೆಳಗಿನ ಮಂಡಾಡಿ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಗೆದ್ದುಕೊಂಡರು. ಜಗಮಗಿಸುವ ವಿದ್ಯುತ್ ಬೆಳಕಿನಲ್ಲಿ ಬಣ್ಣ ಬಣ್ಣದ ಗೂಡುದೀಪಗಳು ನೋಡುಗರ ಮನ ಸೆಳೆಯಿತು.

Related posts

Leave a Reply

Your email address will not be published. Required fields are marked *