Header Ads
Header Ads
Breaking News

ಬಂಟ್ವಾಳ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಕಚೇರಿ ಉದ್ಘಾಟನೆ ಬಿಸಿ ರೋಡಿನಲ್ಲಿ ಉದ್ಘಾಟನಾಗೊಂಡ ನೂತನ ಯೋಜನಾ ಪ್ರಾಧಿಕಾರದ ಕಚೇರಿ

ಟೀಕಾಕಾರರ ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅಭಿವೃದ್ಧಿ ಕಾರ್ಯಗಳೇ ನನ್ನ ದಿಟ್ಟ ಉತ್ತರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಬಿ.ಸಿ.ರೋಡಿನಲ್ಲಿ ಬಂಟ್ವಾಳ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ನನ್ನನ್ನು ಮತ್ತು ಯು.ಟಿ. ಖಾದರ್ ಅವರನ್ನು ಭಯೋತ್ಪಾದಕರು ಎಂದು ಹೇಳಿಕೆ ನೀಡುತ್ತಾರೆ, ಹಿಂಸೆಗೆ ಅಹಿಂಸೆಯೇ ಉತ್ತರ, ದ್ವೇಷಕ್ಕೆ ಪ್ರೀತಿಯೇ ಉತ್ತರ, ಸಾಮಾಜಿಕ ಸಾಮರಸ್ಯದ ಘರ್ಷಣೆಯ ವಿರುದ್ದ ಮಾತನಾಡಿದರೆ ನಾವು ಭಯೋತ್ಪಾದಕರಂತೆ ಕಾಣುತ್ತೇವೆ. ಸಮಾಜದಲ್ಲಿ ಅಶಾಂತಿಯ ವಾತವರಣ ಸೃಷ್ಟಿಸಿ ಭಯ ಹುಟ್ಟಿಸುವವರೇ ಭಯೋತ್ಪಾದಕರು. ಅದು ಯಾರು ಎನ್ನುವುದು ಜಿಲ್ಲೆಯ ಪ್ರಜ್ಞಾವಂತ ನಾಗರಿಕೆ ತಿಳಿದಿದೆ ಎಂದರು.

Related posts

Leave a Reply