Header Ads
Header Ads
Breaking News

ಬಂಟ್ವಾಳ: ನೂತನ ಬ್ರಹ್ಮರಥದ ಸಮರ್ಪಣಾ ಕಾರ್ಯಕ್ರಮ

ಸುಮಾರು 50ಲಕ್ಷ ರೂ. ವೆಚ್ಚದಲ್ಲಿ ಬಂಟ್ವಾಳ ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರಕ್ಕೆ ನಿರ್ಮಾಣಗೊಂಡ ನೂತನ ಬ್ರಹ್ಮರಥದ ಸಮರ್ಪಣಾ ಕಾರ್ಯಕ್ರಮವು ಜರುಗಿತು.ಮಾಜಿ ಸಚಿವ ಬಿ. ರಮಾನಾಥ ರೈ ಅವರು ನೂತನ ಬ್ರಹ್ಮರಥದ ಉದ್ಘಾಟನೆ ಮತ್ತು ಬಳಿಕ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಉಳಿ ಗ್ರಾಮಸ್ಥರ ಧಾರ್ಮಿಕ ಇಚ್ಛಾ ಶಕ್ತಿ ಅದ್ಭುತವಾಗಿದ್ದು, ಧರ್ಮ ನಿಷ್ಠರಾಗಿ ದೇವಸ್ಥಾನಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಸುಂದರ ಬ್ರಹ್ಮರಥದ ನಿರ್ಮಾಣ ಭಕ್ತರ ಪರಿಶುದ್ಧ ಮನಸ್ಸಿನ ಪ್ರತೀಕವಾಗಿದ್ದು, ಉತ್ತಮ ಕಾರ್ಯಕ್ಕೆ ದೇವರ ಅನುಗ್ರಹವಾಗಿದೆ ಎಂದರು.
ದೇವಸ್ಥಾನದ ಸ್ಥಾಪಕಾಧ್ಯಕ್ಷ ಕೆ.ಜಾರಪ್ಪ ಶೆಟ್ಟಿ ಖಂಡಿಗ ಅವರು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಬಿ. ಪದ್ಮಶೇಖರ ಜೈನ್, ತಾ.ಪಂ. ಸದಸ್ಯೆ ಬೇಬಿ ಕೃಷ್ಣಪ್ಪ, ಉಳಿ ಗ್ರಾ.ಪಂ. ಅಧ್ಯಕ್ಷೆ ದೀನಾಕ್ಷಿ ಮಲ್ಯೋಡಿ, ಮುಂಬಯಿ ಉದ್ಯಮಿ ನಾರಾಯಣ ಶೆಟ್ಟಿ ಕಕ್ಯ, ಉದ್ಯಮಿ ವಿಶ್ವನಾಥ ಶೆಟ್ಟಿ ಬೆದ್ರಾಡಿ, ಉಪ್ಪಿನಂಗಡಿ ದಂತ ವೈದ್ಯ ಡಾ| ರಾಜಾರಾಂ ಕೆ.ಬಿ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್ ಉತ್ಸವ ಸಮಿತಿ ಅಧ್ಯಕ್ಷ ವಾಸುದೇವ ಮಯ್ಯ, ಮೊಕ್ತೇಸರ, ಬಾರ್‍ದಡ್ ಗುತ್ತಿನ ಮನೆಯ ರಾಜವೀರ, ಕುಂಞಣ್ಣ ಶೆಟ್ಟಿ, ಮೋನಪ್ಪ ಪೂಜಾರಿ ಮತ್ತು ಅವರ ಪತ್ನಿ ಸರೋಜಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಬ್ರಹ್ಮರಥ ನಿರ್ಮಾಣದ ಕಾಮಗಾರಿ ನಡೆಸಿದ ಅಶ್ವತ್ಥಪುರದ ಕಾಷ್ಠ ಶಿಲ್ಪಿ ಶಿವಪ್ರಸಾದ್ ಆಚಾರ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಬ್ರಹ್ಮರಥಕ್ಕೆ 1.50ಲಕ್ಷ ರೂ. ವೆಚ್ಚದಲ್ಲಿ ಮೆಟ್ಟಿಲುಗಳ ಏಣಿಯನ್ನು ನಿರ್ಮಿಸಿದ ಐವೆರ್ ಫ್ರೆಂಡ್ಸ್ ಯುವಕ ಸಂಘವನ್ನು ಅಭಿನಂದಿಸಲಾಯಿತು.

Related posts

Leave a Reply