Header Ads
Header Ads
Breaking News

ಬಂಟ್ವಾಳ: ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಶ್ರೀ ವೈದ್ಯನಾಥ, ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಕೇಲ್ದೋಡಿ  ಶ್ರೀ ವೈದ್ಯನಾಥ, ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರ ಆರಂಭಗೊಂಡಿದೆ.

ಮಧ್ಯಾಹ್ನದ ವೇಳೆ ಇಲ್ಲಿನ ಚಿತ್ರಕೂಟ ನಾಗಬನ ಹಾಗೂ ಒಂಟಿನಾಗಬನದಲ್ಲಿ ಆಶ್ಲೇಷ ಬಲಿ ಮತ್ತು ನಾಗತಂಬಿಲ  ನಡೆದಿದ್ದು ರಾತ್ರಿ ಭಕ್ತ ಜನರ ಶ್ರದ್ದಾ ಭಕ್ತಿಯ ಪಾಲ್ಗೊಳ್ಳುವಿಕೆಯ ಮೂಲಕ ದೈವದ ನೇಮೋತ್ಸವ ನಡೆಯಿತು. ಆರಂಭದಲ್ಲಿ ಕ್ಷೇತ್ರದ ಕಾರಣಿಕ ಶಕ್ತಗಳಾದ ಬೈದರ್ಕಳುಗಳ ದರ್ಶನ ಸೇವೆ ನಡೆಯಿತು. ಬಳಿಕ ಕ್ಷೇತ್ರದ ಅರಸು ಶ್ರೀ ವೈದ್ಯನಾಥ ದೈವದ ನೇಮೋತ್ಸವ ನಡೆಯಿತು. ಈ ವೇಳೆ ದೈವವು ಕ್ಷೇತ್ರದ ಸುಮಾರು ಅರ್ಧ ಕಿ.ಮೀ.ದೂರದಲ್ಲಿರುವ ಮಾಡಕ್ಕೆ ಬೇಟಿ ನೀಡುವ ದೃಶ್ಯ ಮನಮೋಕವಾಗಿತ್ತು.  ಬಳಿಕ ಕ್ಷೇತ್ರ ಸಾನಿಧ್ಯಗಳಾದ ಮಹಿಸಂದಾಯ, ರಕ್ತೇಶ್ವರೀ ದೈವಗಳ ನೇಮೋತ್ಸವ ಜರುಗಿತು.  ಈ ಸಂದರ್ಭ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಅಂಚನ್, ಕೇಲ್ದೋಡಿ ಗುತ್ತುವಿನ ಕೋಟಿ ಪೂಜಾರಿ, ಪಂಜಿಕಲ್ಲು ಗುತ್ತು ಕೃಷ್ಣರಾಜ ಜೈನ್, ಪೀರ್ದೊಟ್ಟು ಗುತ್ತು ಪ್ರಕಾಶ್ ಕುಮಾರ್ ಜೈನ್,  ಪ್ರಧಾನ ಅರ್ಚಕ ಶ್ರೀಪತಿ ಭಟ್, ಪ್ರಧಾನ ಕಾರ್ಯದರ್ಶಿ ಆನಂದ ಕೋಟ್ಯಾನ್, ಕೋಶಾಧಿಜಕಾರಿ  ಗೋಪಾಲ ಪೂಜಾರಿ ಅಮೈ, ಆಡಳಿತ ಮಂಡಳಿ ಸದಸ್ಯರಾದ ಪದ್ಮನಾಭ ಪೂಜಾರಿ,  ಗೋಪಾಲ ಪೂಜಾರಿ, ಯಶೋಧರ ಕೇಲ್ದೋಡಿ, ಯೋಗೀಶ್ ಪೂಜಾರಿ ಕೇಲ್ದೋಡಿ, ಜನಾರ್ಧನ ಪೂಜಾರಿ, ಕೆ.ಸಿ.ರವಿ ಪೂಜರಿ ಪಾಂಗಳ, ಪ್ರಮುಖರಾದ  ಪುರುಷೋತ್ತಮ ಅಂಚನ್, ಶೇಖರ ಅಂಚನ್ ಮತ್ತಿತರರು ಹಾಜರಿದ್ದರು.

Related posts

Leave a Reply

Your email address will not be published. Required fields are marked *