Header Ads
Header Ads
Header Ads
Breaking News

ಬಂಟ್ವಾಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ

ಬಂಟ್ವಾಳ ತಾಲೂಕಿನ ಸರಕಾರಿ ಕಚೇರಿಗಳ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಶುಲ್ಕದ ಬಗ್ಗೆ ಸರಿಯಾದ ಸೂಚನಾ ಫಲಕವನ್ನು ಹಾಕುವಂತೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ನಿವಾರಣಾ ಸಭೆಯಲ್ಲಿ ಅವರು ಈ ಆದೇಶ ಹೊರಡಿಸಿದ್ದಾರೆ. ಕೇಂದ್ರ ಸರಕಾರ ನೀಡುವ ಆಯುಷ್ಮಾನ್ ಆರೋಗ್ಯ ಕಾರ್ಡ್ ಪಡೆಯಲು ಬಂಟ್ವಾಳದ ಸೈಬರ್ ಕೇಂದ್ರದವೊಂದರಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುಲಾಗುತ್ತಿದೆ. ಸಾಮಾನ್ಯವಾಗಿ 30 ರೂಪಾಯಿಗೆ ಆಯುಷ್ಮಾನ್ ಕಾರ್ಡ್ ಪಡೆಯಬಹುದಾಗಿದ್ದಾರೆ, ಬಂಟ್ವಾಳದ ಕೆಲ ಸೈಬರ್ ಕೇಂದ್ರದಲ್ಲಿ 100 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ನಿಮಗೆ ಎಲ್ಲಿ ಕಡಿಮೆಯಲ್ಲಿ ಮಾಡಿಕೊಡುತ್ತಾರೋ ಅಲ್ಲಿಗೆ ಹೋಗಿ ಎನ್ನುವ ಉಡಾಫೆಯ ಉತ್ತರವನ್ನು ಸೈಬರ್ ಕೇಂದ್ರದವರು ನೀಡುತ್ತಾರೆ ಎಂದು ದಲಿತ ಮುಖಂಡ ವಿಶ್ವನಾಥ ಚೆಂಡ್ತಿಮಾರ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ರಶ್ಮಿ ಎಸ್. ಆರ್. ಸರಕಾರಿ ಸೇವಾ ಕೇಂದ್ರಗಳಲ್ಲಿ ಸಾರ್ವಜನಕರಿಂದ ಸಂಗ್ರಹಿಸುವ ಶುಲ್ಕದ ಸೂಚನಾಫಲಕವನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಅಳವಡಿಸುವಂತೆ ಸೂಚಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ವಿಶ್ವನಾಥ ಚೆಂಡ್ತಿಮಾರ್ ಅವರ ದೂರಿನ ಹಿನ್ನಲೆಯಲ್ಲಿ ಸೈಬರ್ ಕೇಂದ್ರದಲ್ಲಿ ಹೆಚ್ಚುವರು ಶುಲ್ಕ ವಸೂಲು ಮಾಡುವ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.

ಅರಣ್ಯ ಇಲಾಖೆಯ ವತಿಯಿಂದ ವಿತರಿಸಲಾಗಿರುವ ಗ್ಯಾಸ್ ಸಿಲಿಂಡರ್‍ಗಳಿಗೆ ಗ್ಯಾಸ್ ಏಜೆನ್ಸಿಯವರು ಹೆಚ್ಚುವರಿಯಾಗಿ ರೂ. 100 ಹಣ ಪಡೆಯುತ್ತಿದ್ದಾರೆ. ಇದು ಹಣ ದೋಚುವ ದಂಧೆ ಎಂದು ವಿಶ್ವನಾಥ ಚೆಂಡ್ತಿಮಾರ್ ಆರೋಪಿಸಿದರು. ಹೆಚ್ಚುವರಿ ಹಣ ವಸೂಲಿ ಮಾಡುವ ಗ್ಯಾಸ್ ಏಜೆನ್ಸಿಯ ವಿರುದ್ದ ಪೊಲೀಸರಿಗೆ ದೂರು ನೀಡುವಂತೆ ಅರಣ್ಯ ಇಲಾಖಾಧಿಕಾಋಇ ಸಲಹೆ ನೀಡಿದರೆ, ಈ ಬಗ್ಗೆ ತನಗೆ ಲಿಖಿತ ದೂರು ನೀಡುವಂತೆ ತಹಶೀಲ್ದಾರ್ ತಿಳಿಸಿದರು.

ಕನಪಾದೆ ಎಂಬಲ್ಲಿ ಅಂಬೇಡ್ಕರ್ ವಸತಿ ಯೊಜನೆಯಡಿ ನಿರ್ಮಾಣಗೊಂಡ ಮನೆ ಅನುದಾಣ ಸಿಗದೆ ಅರ್ಧದಲ್ಲಿ ಉಳಿದಿದೆ. ಹಣ ಬಾರದೆ ಒಂದೂವರೆ ವರ್ಷ ಕಳೆಯಿತು ಎಂದು ವಿಶ್ವನಾಥ ಚೆಂಡ್ತಿಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ತಾಲೂಕಿನ 58 ಗ್ರಾ.ಪಂಗಳಲ್ಲೂ ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ ಯೋಜನೆ, ರಾಜೀವ ಗಾಂಧಿ ವಸತಿ ಯೋಜನೆಯಡಿ ಸುಮಾರು 2 ಕೋಟಿ ರೂಪಾಯಿಯಷ್ಟು ಹಣ ಬರಲು ಬಾಕಿ ಇದೆ. ದ.ಕ. ಜಿಲ್ಲೆಯಲ್ಲಿ ಸುಮಾರು 14 ಕೋಟಿ ರೂಪಾಯಿ ಹಣ ಬರಲು ಬಾಕಿ ಇದೆ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಇಓ ರಾಜಣ್ಣ, ಸಮಾಜ ಕಲ್ಯಾಣಾಧಿಕಾರಿ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಂಗಾಧರ ಮಿತ್ತಪರಾರಿ, ಪದ್ಮನಾಭ ನರಿಂಗಾಣ, ಸತೀಶ್ ಅರಳ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *