Header Ads
Header Ads
Breaking News

ಬಂಟ್ವಾಳ ಪುರಸಭಾ ಚುನಾವಣೆ ಹಿನ್ನೆಲೆ. ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ. ಬಿ.ಸಿ. ರೋಡ್‌ನಲ್ಲಿ ಶಾಸಕ ರಾಜೇಶ್ ನಾಕ್ ಅವರಿಂದ ಬಿಡುಗಡೆ.

ಬಂಟ್ವಾಳ: ಪುರಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಯವರು ಗುರುವಾರ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ ಮುಂದಿನ 5 ವರ್ಷಗಳಲ್ಲಿ ಪುರಸಭೆಯಲ್ಲಿ ಬಿಜೆಪಿ ಆಡಳಿತದ ಯೋಜನೆಗಳ ಮುನ್ನೋಟದ ಬಗ್ಗೆ ಮಾಹಿತಿ ನೀಡಿದರು. ಪುರಸಭಾ ವ್ಯಾಫ್ತಿಯ ನಾಗರಿಕರ ಸಹಭಾಗಿತ್ವದೊಂದಿಗೆ ಕಾರ್ಯಪಡೆ ರಚಿಸಿ ಸ್ವಚ್ಛ ಪುರಸಭೆಗೆ ಶ್ರಮಿಸುವುದು, ಸಮಗ್ರ ಒಳಚರಂಡಿ ಯೋಜನೆಯನ್ನು ಅನುಷ್ಠಾನಗೊಳಿಸಿ ಆಯ್ದ ಭಾಗಗಳಲ್ಲಿ ಕೊಳಚೆ ನೀರು ಸಂಸ್ಕರಣ ಘಟಕ ಸ್ಥಾಪಿಸಿ ಸಂಸ್ಕರಿಸಿದ ನೀರನ್ನು ಸಾರ್ವಜನಿಕ ಉದ್ಯಾನವನಗಳಿಗೆ ಪೂರೈಕೆ ಮಾಡುವುದು, ಪಾರದರ್ಶಕ ಮತ್ತು ಭ್ರಷ್ಠಾಚಾರ ಮುಕ್ತ ಆಡಳಿತ, ಪುರಸಭಾ ವಾಸಿಗಳಿಗೆ ಶುದ್ದ ಕುಡಿಯುವ ನೀರಿನ ಪೂರೈಕೆ, ಪ್ಲಾಸ್ಟಿಕ್ ಮುಕ್ತ ಪುರಸಭೆ,3 ತಿಂಗಳಿಗೊಮ್ಮೆ ವಾರ್ಡ್ ಸಭೆ, ಅಹವಾಲು ಸ್ವೀಕಾರ ಕೇಂದ್ರ, ನಗರ ಸುಂದರೀಕರಣಕ್ಕಾಗಿ ಹಸಿರು ಪುರಸಭೆ, ಅನಧಿಕೃತ ಫ್ಲೆಕ್ಸ್ ಮತ್ತು ಅನಧಿಕೃತ ಹೋರ್ಡಿಂಗ್ ಮುಕ್ತ ಪುರಸಭೆ, ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ, ಪುರಸಭೆಯ ಆದಾಯ ಹೆಚ್ಚಿಸಲು ವಸತಿ ಸಂಕೀರ್ಣಗಳ ನಿರ್ಮಾಣ, ಸಿಸಿ ಕ್ಯಾಮರಗಳ ಅಳವಡಿಸಿ ಕಾನೂನು ಸುವ್ಯವಸ್ಥೆ ಹಾಗೂ ಸ್ವಚ್ಛತೆಯ ಪಾಲನೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು. ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಈ ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗಿರುವ ತ್ಯಾಜ್ಯ ಸಂಸ್ಕರಣ ಘಟಕವನ್ನು ಬಿಜೆಪಿ ಆಡಳಿತಕ್ಕೆ ಬಂದರೆ ಮರುಸ್ಥಾಪಿಸುವುದಾಗಿ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಹಿಂದೆ ಆರೋಗ್ಯ ಹಾಗೂ ಪರಿಸರ ಸಚಿವರು ಜಿಲ್ಲೆಯವರೇ ಆಗಿದ್ದರೂ ಕೂಡ ಇಚ್ಛಾಶಕ್ತಿಯ ಕೊರತೆಯಿಂದ ಘಟಕ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಸ್ಕರಣ ಘಟಕ ಸ್ಥಾಪಿಸುವಂತೆ ಸದನ ಸಮಿತಿಯ ಆದೇಶವಿದ್ದು ವೈಜ್ಞಾನಿಕವಾಗಿ ಹಾಗೂ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದಂತೆ ಘಟಕ ಸ್ಥಾಪಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಪಕ್ಷದ ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ, ರಾಮದಾಸ ಬಂಟ್ವಾಳ, ದಿನೇಶ್ ಅಮ್ಟೂರು, ಗೋವಿಂದ ಪ್ರಭು, ಮೋನಪ್ಪ ದೇವಸ್ಯ, ದಿನೆಶ್ ಭಂಡಾರಿ, ಸೀತಾರಾಮ, ಹಾಗೂ ಅಭ್ಯರ್ಥಿಗಳು ಹಾಜರಿದ್ದರು.

Related posts

Leave a Reply