Header Ads
Header Ads
Header Ads
Breaking News

ಬಂಟ್ವಾಳ ಪುರಸಭೆಯ ಅಧ್ಯಕ್ಷರ ಆಯ್ಕೆ ಕಾಂಗ್ರೆಸ್‌ನ ವಾಸು ಪೂಜಾರಿ ಆವಿರೋಧವಾಗಿ ಆಯ್ಕೆ

ಬಂಟ್ವಾಳ: ಸುದೀರ್ಘ ನಾಲ್ಕು ವರ್ಷಗಳ ಬಳಿಕ ಬಂಟ್ವಾಳ ಪುರಸಭೆಯ ಕೊನೆಯ ಒಂದು ವರ್ಷದ ಅವಧಿಗೆ ನಿರೀಕ್ಷೆಯಂತೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ವಾಸು ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಕಾಂಗ್ರೆಸ್‌ನ ಜಗದೀಶ್ ಕುಂದರ್, ಚಂಚಲಾಕ್ಷಿ, ಪ್ರಭಾ ಆರ್ .ಸಾಲಿಯಾನ್ ಜೆಡಿ‌ಎಸ್‌ನ ಬಿ.ಮೋಹನ್, ಎಸ್. ಡಿ .ಪಿ. ಐ. ಮೊನೀಶ್ ಅಲಿ ಅವಿರೋಧವಾಗಿ ಆಯ್ಕೆಯಾದರು.ಮಂಗಳವಾರ ಸಾಮಾನ್ಯ ಸಭೆಗೆ ಆರ್ಧ ತಾಸಿಗೆ ಮುನ್ನ ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆಯನ್ನು ಅಧ್ಯಕ್ಷ ರಾಮಕೃಷ್ಣ ಆಳ್ವ ನಡೆಸಿದರು.

ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ ಸದಸ್ಯರು ಬಹಿಷ್ಕರಿಸಿದ್ದರು. ಈ ಸಂದರ್ಭ ಬಿಜೆಪಿ ಸದಸ್ಯ ದೇವದಾಸ ಶೆಟ್ಟಿ ಈ ಪ್ರಕ್ರಿಯೆ ಕಾನೂನು ಬಾಹಿರ ಎಂದು ಸಲ್ಲಿಸಿದ ಆಕ್ಷೇಪ ಅರ್ಜಿಯನ್ನು ದಾಖಲಿಸಲಾಯಿತು. ಇದೇ ವೇಳೆ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿಯವರನ್ನು ಅಭಿನಂದಿಸಿದರು. ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಮಹಮ್ಮದ್ ನಂದಾವರ, ಮಲ್ಲಿಕಾ ಶೆಟ್ಟಿ ಮೊದಲಾವರು ವಾಸು ಪೂಜಾರಿಯವರನ್ನು ಅಭಿನಂದಿಸಿದರು.

Related posts

Leave a Reply