Header Ads
Header Ads
Breaking News

ಬಂಟ್ವಾಳ ಪುರಸಭೆಯ ಸ್ಥಾಯಿ ಸಮಿತಿ ಸಭೆ ಸ್ಥಾಯಿ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ಹಾಗಾದರೆ ಸ್ಥಾಯಿ ಸಮಿತಿ ಇರುವುದಾದರೂ ಯಾಕೆ? ಮುಖ್ಯಾಧಿಕಾರಿ ವಿರುದ್ಧ ವಾಸು ಪೂಜಾರಿ ವಾಗ್ದಾಳಿ

ಬಂಟ್ವಾಳ: ಸ್ಥಾಯಿ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎಲ್ಲಾ ನಿರ್ಧಾರವನ್ನು ಅಧಿಕಾರಿಗಳೇ ತೆಗೆದುಕೊಳ್ಳವುದಾದರೆ ಸ್ಥಾಯಿ ಸಮಿತಿ ಇರುವುದಾದರೂ ಯಾಕೆ ? ಸಮಿತಿಯನ್ನೇ ಬರ್ಕಾಸ್ತುಗೊಳಿಸಿ, ಹೀಗೆಂದು ಮುಖ್ಯಾಧಿಕಾರಿ ವಿರುದ್ದ ಅಧ್ಯಕ್ಷ ವಾಸು ಪೂಜಾರಿ ಹರಿಹಾಯ್ದ ಪ್ರಸಂಗ ಬಂಟ್ವಾಳ ಪುರಸಭೆಯ ಸ್ಥಾಯಿಸಮಿತಿ ಸಭೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ವಾಸುಪೂಜಾರಿ ಅವರು,ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸುವುದಿದ್ದರೂ ಅದು ಸ್ಥಾಯಿ ಸಮಿತಿ ಅಧ್ಯಕ್ಷರ ಉಪಸ್ಥಿತಿಯಲ್ಲೇ ನಡೆಯಬೇಕು,ಕಾರ್ಯಕ್ರಮವೊಂದರ ಆಹ್ವಾನಪತ್ರದಲ್ಲೂ ತನ್ನ ಹೆಸರನ್ನು ಕೈ ಬಿಡಲಾಗಿದೆ. ಇತ್ತೀಚೆಗೆ ಬೀದಿ ವ್ಯಾಪಾರಸ್ಥರ ಸಭೆಗೂ ಕರೆಯದೆ ಅವಮಾನಿಸಲಾಗಿದೆ. ಎಲ್ಲ ನಿರ್ಧಾರ ಅಧಿಕಾರಿಗಳೇ ಮಾಡುವುದಾದರೆ ಪುರಸಭೆಯಲ್ಲಿ ಆಡಳಿತ ವ್ಯವಸ್ಥೆಯಾದರೂ ಇರುವುದ್ಯಾಕೆ ಎಂದು ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು.ಬಂಟ್ವಾಳ ಕೊಟ್ರಮಣಗಂಡಿಯಲ್ಲಿರುವ ನೂತನ ಶೌಚಾಲಯಕ್ಕೆ ಇನ್ನು ವಿದ್ಯುತ್ ಸಂಪರ್ಕವಾಗದೆ ಇರುವಾಗ ಅಷ್ಟೊಂದು ತರಾತುರಿಯಲ್ಲಿ ಉದ್ಘಾಟಿಸುವ ಅಗತ್ಯವೆನಿತ್ತು. ಬಸ್ ತಂಗುದಾಣಕ್ಕೆ ಇನ್ನು ಇಂಟರ್ ಲಾಕ್ ಅಳವಡಿಸಿಲ್ಲ ಯಾಕೆ ಎಂದು ಅಧ್ಯಕ್ಷ ವಾಸು ಪೂಜಾರಿ ಪ್ರಶ್ನಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಸಚಿವರೇ ಹೇಳಿದ್ದರಿಂದ ಶೌಚಾಲಯದ ಉದ್ಘಾಟನೆಗೆ ದಿನ ನಿಗದಿ ಮಾಡಲಾಗಿದೆ. ಉದ್ಘಾಟನೆಯಾದ ಬಳಿಕ ಶೌಚಾಲಯದ ಬೀಗವೇ ತೆರೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖರ್ಚು-ವೆಚ್ಚದಲ್ಲಿ ಕಂಡು ಬಂದಿರುವ ಲೋಪಗಳ ಬಗ್ಗೆ ಸದಸ್ಯೆ ಚಂಚಲಾಕ್ಷಿ ಅಸಮಾಧಾನಗೊಂಡರು .ಇದನ್ನು ಹಾಗೆ ಬಿಟ್ಟರೆ ಸಾಮಾನ್ಯ ಸಭೆಯಲ್ಲೂ ಚರ್ಚೆ, ಗಲಾಟೆಗೂ ಕಾರಣವಾಗುತ್ತದೆ ಎಂದು ಸಭೆಯ ಗಮನಸೆಳೆದು ಇಂಜಿನಿಯರ್ ಅವರಲ್ಲು ಪ್ರಶ್ನಿಸಿ ಮುಖ್ಯಾಧಿಕಾರಿಯವರು ಇದನ್ನು ಪರಿಶೀಲಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಡಿಮೆಲ್ಲೊ ಅವರು ತನಗೆ ಸಾಕಷ್ಟು ಜವಬ್ದಾರಿಯಿದ್ದು,ಖರ್ಚು- ವೆಚ್ಚವನ್ನು ನೋಡಿಕೊಳ್ಳವುದು ಕಾನೂನಾತ್ಮಕವಾಗಿಯೂ ನನ್ನ ಕೆಲಸವಲ್ಲ ಎಂದರು. ನುರಿತ ಸಿ.ಎ.ಪದವಿ ಹೊಂದಿರುವ ಅಕೌಂಟೆಂಟನ್ನು ನಿಯಕ್ತಿಗೊಳಿಸಲು ಅರ್ಜಿಆಹ್ವಾನಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.ಅದಷ್ಟು ಪುರಸಭಾ ವ್ಯಾಪ್ತಿಯವರಿಗೆ ಅವಕಾಶ ಕಲ್ಪಿಸುವಂತೆ ಅಧ್ಯಕ್ಷ ವಾಸು ಪೂಜಾರಿ ಸೂಚಿಸಿದರು.
ಸದಸ್ಯರಾದ ಜಗದೀಶ್ ಕುಂದರ್,ಪ್ರಭಾ ಸಾಲಿಯಾನ್ ಹಾರಿದ್ದರು.ಸಿಬಂದಿ ರಜಾಕ್ ,ಆರೋಗ್ಯಾಧಿಕಾರಿ ರತ್ನಪ್ರಸಾದ್, ಕಚೇರಿ ವ್ಯವಸ್ಥಾಪಕಿ ಲೀಲಾವತಿ ಉಪಸ್ಥಿತರಿದ್ದರು.