Header Ads
Header Ads
Breaking News

ಬಂಟ್ವಾಳ ಪುರಸಭೆಯ 2019-20ನೇ ಸಾಲಿನ ಅಯವ್ಯಯ ಪೂರ್ವಭಾವಿ ಸಮಾಲೋಚನಾ ಸಭೆ

ಬಂಟ್ವಾಳ: ಪುರಸಭೆಯ 2019-20 ನೇ ಸಾಲಿನ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಮಂಗಳವಾರ ಬಂಟ್ವಾಳ ಪುರಸಭೆ ಕಾಟಾಚಾರದ ಪೂರ್ವಭಾವಿ ಸಮಾಲೋಚನಾ ಸಭೆ ನಡೆಸಿದೆ. ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಬೆರಳೆಣಿಕೆಯ ಮಂದಿಯಷ್ಠೆ ಭಾಗವಹಿಸಿದ್ದು ಅವರ ವ್ಯಾಫ್ತಿಯ ಕೆಲ ಅಭಿವೃದ್ದಿ ಕಾರ್ಯಗಳನ್ನು ಸೇರಿಸಿಕೊಂಡು ಮುಂದಿನ ಆಯವ್ಯಯದಲ್ಲಿ ಸೇರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಂಗಳೂರು ಸಹಾಯಕ ಕಮಿಷನರ್, ಪುರಸಭಾ ಆಡಳಿತಾಧಿಕಾರಿ ರವಿಚಂದ್ರ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾಲೋಚನಾ ಸಭೆಗೆ ಪುರಸಭಾ ವ್ಯಾಪ್ತಿಯ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 21 ಮಂದಿಯನ್ನು ಆಹ್ವಾನಿಸಿತ್ತು. ನಿವೃತ್ತ ಮುಖ್ಯಾಧಿಕಾರಿ ಶಿವಶಂಕರ್, ದಾಮೋದರ ಸಂಚಯಗಿರಿ, ಮಾಜಿ ಸದಸ್ಯೆ ವಸಂತಿ ಗಂಗಾಧರ್, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಅಧಿಕಾರಿ ಸಹಿತ ಐದು ಮಂದಿ ಮಾತ್ರ ಭಾಗವಹಿಸಿ ಸಲಹೆಗಳನ್ನು ನೀಡಿದರು. ಈ ಹಿಂದಿನ ಎರಡು ಮೂರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ನೀಡಲಾಗಿದ್ದ ಸಲಹೆಗಳನ್ನು ಪುರಸಭೆ ಪರಿಗಣಿಸದೆ ತಮ್ಮದೇ ಆದ ರೀತಿಯಲ್ಲಿ ಆಯವ್ಯಯವನ್ನು ಮಂಡಿಸಿದ ಹಿನ್ನಲೆಯಲ್ಲಿ ಈ ಬಾರಿಯ ಸಭೆಗೆ ಬಹುತೇಕ ಸಂಘ ಸಂಸ್ಥೆಗಳು ಭಾಗವಹಿಸಲು ಹಿಂದೇಟು ಹಾಕಿದೆ ಎಂದು ತಿಳಿದು ಬಂದಿದೆ.ಬಿ.ಸಿ.ರೋಡಿನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಂಡರ್ ಪಾಸ್ ನಿರ್ಮಿಸಬೇಕು, ಜಕ್ರಿಬೆಟ್ಟುವಿನಿಂದ ಬ್ರಹ್ಮರಕೊಟ್ಲುವರೆಗೆ ರಿಂಗ್ ರಸ್ತೆ, ಸಮಗ್ರ ಒಳಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು, ಬಡ್ಡಕಟ್ಟೆ ಬಸ್ಸು ನಿಲ್ದಾಣಕ್ಕೆ ಡಾಮಾರೀಕರಣ, ಕುಡಿಯುಬ ನೀರಿನ ಪೈಪ್‌ಲೈನ್ ವಿಸ್ತರಣೆ, ಸಂಚಯಗಿರಿಯಲ್ಲಿ ಮಳೆ ನೀರು ಹರಿಯಲು ಚರಂಡಿ, ಕೈಕುಂಜೆ ಬಡಾವಣೆ ರಸ್ತೆ ಅಭಿವೃದ್ದಿ, ಪ್ಲಾಸ್ಟಿಕ್ ಬ್ಯಾಗ್ ಬಳಕೆಯ ವಿರುದ್ದ ಜಾಗೃತಿ, ಕೊಟ್ರಮಣ ಗುಂಡಿ ಬಸ್ಸು ನಿಲ್ದಾಣಕ್ಕೆ ಇಂಟರ್‌ಲಾಕ್ ಅಳವಡಿಕೆ, ಕೈಕುಂಜೆ ರುದ್ರಭೂಮಿ ಅಭಿವೃದ್ದಿ, ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಅಭಿವೃದ್ದಿ ಮೊದಲಾದ ಸಲಹೆಗಳು ಸಭೆಯಲ್ಲಿ ಕೇಳಿ ಬಂದಿದ್ದು ಮುಂದಿನ ಬಜೆಟ್‌ನಲ್ಲಿ ಅಳವಡಿಸಿಕೊಳ್ಳುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.

Related posts

Leave a Reply