Header Ads
Breaking News

ಬಂಟ್ವಾಳ: ಪುರಸಭೆ, ಪತ್ರಕರ್ತರ ಸಂಘದಿಂದ ಸ್ವಚ್ಛತೆ

 ಬಂಟ್ವಾಳ ಪುರಸಭೆ, ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ, ಜೇಸಿಐ ಬಂಟ್ವಾಳ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಇದರ ಜಂಟಿ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ಬಂಟ್ವಾಳ ಬಡ್ಡಕಟ್ಟೆಯಲ್ಲಿ ನಡೆಯಿತು.ಕೊಳೆತ ತ್ಯಾಜ್ಯಗಳಿಂದ ದುರ್ವಾಸನೆ ಬೀರುತ್ತಿದ್ದ ಸ್ಥಳವನ್ನು ಸಂಪೂರ್ಣ ಸ್ವರ್ಚಚಗೊಳಿಸಲಾಯಿತು. ಬೆಳಿಗ್ಗೆ8ಗಂಟೆಗೆ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ರಮ ಎರಡು ಗಂಟೆಗಳ ಕಾಲ ನಡೆಸಿ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಯಿತು.ಇದೇ ಸಂದರ್ಬ ಪ್ಲಾಸ್ಟಿಕ್ ಚೀಲ, ಬಾಟಲುಗಳಿದ್ದ ಪಾಳುಬಿದ್ದ ಸ್ಥಿತಿಯಲ್ಲಿದ್ದ ಬಡ್ಡಕಟ್ಟೆ ಬಸ್ಸುನಿಲ್ದಾಣವನ್ನು ಸಂಪೂರ್ಣ ಸ್ವಚ್ಛಗೊಳಿಸಿ ನಾಲು ಸಂಘಟನೆಗಳ ನೆರವಿನೊಂದಿಗೆ ನವೀಕರಣಗೊಳಿಸಲು ತಿರ್ಮಾನಿಸಲಾಯಿತು.

ಬಸ್ಸು ನಿಲ್ದಾಣಕ್ಕೆ ಸುಣ್ಣ ಬಣ್ಣ ಬಳಿದು, ಹೊಸ ಛಾವಣಿ ಅಳವಡಿಸಿ ಪ್ರಯಾಣಿಕರಿಗೆ ಉಪಯೋಗವಾಗುವಂತೆ ಮಾಡಲು ತೀರ್ಮಾನಿಸಿದ್ದು ಅಕ್ಟೋಬರ್ 2 ಗಾಂಧಿಜಯಂತಿಯಂದು ಬಸ್ಸು ನಿಲ್ದಾಣವನ್ನು ಪುನರ್ ನವೀಕರಣಗೊಳಿಸಿ ಲೋಕಾರ್ಪಣೆಗೊಳ್ಳಲಿದೆ.ಸ್ವಚ್ಛತಾ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ರೇಖಾಶೆಟ್ಟಿ, ಅಧಿಕಾರಿಗಳಾದ ಮತ್ತಡಿ, ಡೊಮೆನಿಕ್ ಡಿಮೆಲ್ಲೋ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ವೆಂಕಟೇಶ್ ಬಂಟ್ವಾಳ, ಸಂದೀಪ್ ಸಾಲ್ಯಾನ್, ಮೌನೇಶ್ ವಿಶ್ವಕರ್ಮ, ರಹೀಮಾನ್ ತಲಪಾಡಿ, ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಜೇಸಿಐ ಬಂಟ್ವಾಳದ ಅಧ್ಯಕ್ಷ ದಯಾನಂದ ರೈ. ಸದಸ್ಯರಾದ ಡಾ.ಬಾಲಕೃಷ್ಣ, ಸಂತೋಷ್ ಜೈನ್, ಉಮೇಶ್ ಮೂಲ್ಯ, ವೆಂಕಟೇಶ್, ಶ್ರೀನಿವಾಸ್, ಉಮೇಶ್, ದೀಪಕ್ ಸಾಲ್ಯಾನ್ ಹಾಜರಿದ್ದರು.

Related posts

Leave a Reply