Header Ads
Header Ads
Breaking News

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣಾ ಶುಲ್ಕ ರದ್ದು ಮಾಡುವಂತೆ ಸಿಎಂಗೆ ಮನವಿ

ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಾಹಣಾ ಶುಲ್ಕವನ್ನು ಕಟ್ಟಡ ತೆರಿಗೆಯೊಂದಿಗೆ ಸಂಗ್ರಹಿಸುತ್ತಿರುವ ಕ್ರಮವನ್ನು ವಿರೋಧಿಸಿರುವ ಪುರಸಭೆಯ ಚುನಾಯಿತ ಜನಪ್ರತಿನಿಧಿಗಳ ನಿಯೋಗ ಇದನ್ನು ತಕ್ಷಣದಿಂದಲೇ ಕೈ ಬಿಡುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿಯವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.

ಮನವಿಗೆ ಸ್ಪಂದಿಸಿ ಶುಲ್ಕ ರದ್ದು ಮಾಡದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿಸಲಾಗಿದೆ. 2018-19ನೇ ಸಾಲಿನಲ್ಲಿ ಬಂಟ್ವಾಳ ಪುರಸಭಾ ಆಡಳಿತದ ಸಾಮಾನ್ಯ ಸಭೆಯಲ್ಲಿ ಕಟ್ಟಡ ತೆರಿಗೆಗಳೊಂದಿಗೆ ಕಸ ಶುಲ್ಕವನನು ಸೇರಿಸಬಾರೆಂಬ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಸಂದರ್ಭದಲ್ಲಿ ಬಂಟ್ವಾಳ ಪುರಸಭೆಯು ಏಕಾಏಕಿಯಾಗಿ ಈ ನಿರ್ಣಯಕ್ಕೆ ವಿರುದ್ದವಾಗಿ ಜನ ಸಾಮಾನ್ಯರಿಂದ ಕಟ್ಟಡ ತೆರಿಗೆಯೊಂದಿಗೆ ಕಸ ನಿರ್ವಹಣಾ ಶುಲ್ಕವನ್ನು ಸಂಗ್ರಹಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಸ ಸಂಗ್ರಹಣ ಮಾಡಲು ವಾಹನಗಳ ಕೊರೆತಯೂ ಇದೆ. ಈ ಪ್ರದೇಶಗಳಲ್ಲಿ ಈ ಹಿಂದೆ ಇದ್ದಂತೆ ಯಾವುದೇ ಕಸ ಸಂಗ್ರಹ ಶುಲ್ಕವನ್ನು ವಿಧಿಸದೇ ಬಂಟ್ವಾಳ ನಗರ ಪ್ರದೇಶದ ಹಲವಾರು ಕಟ್ಟಡಗಳಿಗೆ ವಿವಿಧ ರೀತಿಯಲ್ಲಿ ಹೆಚ್ಚುವರಿಯಾಗಿ ಶುಲ್ಕವನ್ನು ವಿಧಿಸುತ್ತಿರವುದು ಸರಿಯಲ್ಲ , ಜನ ಸಾಮಾನ್ಯರಿಗೆ ಸಂಪೂರ್ಣವಾಗಿ ಮೂಲ ಸೌಕರ್ಯಗಳನ್ನು ನೀಡಿದೆ ಹೆಚ್ಚುವರಿಯಾಗಿ ಕಸ ಸಂಗ್ರಹಣ ಶುಲ್ಕವನ್ನು ಪಟ್ಟಡ ತೆರಿಗೆಯೊಂದಿಗೆ ಸೇರಿಸಿ ಶುಲ್ಕ ವಸೂಲು ಮಾಡುವುದನ್ನು ಖಡಾಖಂಡಿತ ವಿರೋಧಿಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

ಪುರಸಭಾ ಚುನಾತಿತ ಜನಪ್ರತಿನಿಧಿಗಳಾದ ಬಿ ವಾಸು ಪೂಜಾರಿ, ಗಂಗಾಧರ ಪೂಜಾರಿ, ಜನಾರ್ಧನ ಚೆಂಡ್ತಿಮಾರ್, ಮಹಮ್ಮದ್ ನಂದರ್ ಬೆಟ್ಟು, ಲುಕ್ಮಾನ್ ಮನ್ಜಿಲ್, ಹಸೈನಾರ್, ಮಹಮ್ಮದ್ ಶೆರಿಫ್ , ಲೋಲಾಕ್ಷ ಶೆಟ್ಟಿ, ರಾಮಕೃಷ್ಣ ಆಳ್ವ, ಅಬೂಬಕ್ಕರ್ ಸಿದ್ಧಿಕ್, ಜೆಸಿಂತಾ ಡಿಸೋಜ, ಗಾಯತ್ರಿ ಪ್ರಕಾಶ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *