Header Ads
Header Ads
Breaking News

ಬಂಟ್ವಾಳ: ಪೆಟ್ರೋಲ್ ಹಗೂ ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ಬಂಟ್ವಾಳ ತಾಲೂಕಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಬೆರಳೆಣಿಕೆಯ ಆಟೋ ರಿಕ್ಷಾಗಳು, ಕೆಲ ಖಾಸಗಿ ವಾಹನಗಳು ಮಾತ್ರ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದರೆ ವಾಹನ ಸಂಖ್ಯೆ ವಿರಳವಾಗಿತ್ತು. ಬೆರಳೆಣಿಕೆಯ ಅಂಗಡಿಗಳು ಎಂದಿನಂತೆ ವ್ಯಾಪಾರ ನಡೆಸಿದ್ದರೆ ಭಾಗಶಃ ಅಂಗಡಿ, ಮುಂಗಟ್ಟುಗಳು ಬಂದ್ ಆಚರಿಸಿದ್ದವು.ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ಸುಗಳು ಬೆಳಗ್ಗಿನಿಂದಲೇ ರಸ್ತೆಗಿಳಿಯದೇ ಇದ್ದುದರಿಂದ ಕೆಲ ಪ್ರಯಾಣಿಕರು ಬಸ್ಸು ನಿಲ್ದಾಣದಲ್ಲಿ ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಸದಾ ಬಸ್ಸು ಹಾಗೂ ಪ್ರಯಾಣಿಕರಿಂದ ಗಿಜಿಗಿಡುತ್ತಿದ್ದ ಖಾಸಗಿ ಬಸ್ಸು ನಿಲ್ದಾಣ ಬಿಕೋ ಎನ್ನುತ್ತಿತ್ತು. ಆಸ್ಪತ್ರೆ, ಮೆಡಿಕಲ್, ಹಾಲಿನ ಅಂಗಡಿ ಎಂದಿನಂತೆ ಕಾರ್ಯನಿರ್ವಹಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಖ್ಯೆ ಕಡಿಮೆಯಾಗಿತ್ತು.

ಮೆಲ್ಕಾರ್, ಕಲ್ಲಡ್ಕ, ಪಾಣೆಮಂಗಳೂರು ಬಡ್ಡಕಟ್ಟೆ, ಕೈಕಂಬ ಮೊದಲಾದ ಜನಜಂಗುಳಿಯಿರುವ ಜಂಕ್ಷನ್‌ಗಳು ಬಂದ್‌ನಿಂದ ಸ್ತಭ್ದಗೊಂಡಿದ್ದವು. ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿ ಬೆಂಗಳೂರು ಕಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ಬಸ್ಸಿನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಬಳಿಕ ಮುಂಜಾನೆ ೫.೩೦ರ ವೇಳೆಗೆ ಇನ್ನೊಂದು ಬಸ್ಸಿಗೂ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿ ಘಟನೆಯೂ ನಡೆದಿದೆ. ಕಲ್ಲಡ್ಕದ ಕೆ.ಸಿ. ರೋಡ್ ಬಳಿ ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಾಕಿ ಹಾಕಲಾಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಟಯರ್‌ಗಳನ್ನು ಬದಿಗೆ ಸರಿಸಿದ್ದಾರೆ. ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಒತ್ತಾಯಪೂರ್ವಕವಾಗಿ ಬಂದ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ.

Related posts

Leave a Reply