Header Ads
Breaking News

ಬಿಸಿರೋಡ್‌ನಲ್ಲಿ ರಿಕ್ರಿಯೇಷನ್ ಕ್ಲಬ್‌ಗೆ ದಾಳಿ: ಬಂಟ್ವಾಳ ನಗರ ಪೊಲೀಸರಿಂದ ದಾಳಿ

ಬಂಟ್ವಾಳ :   ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಎರಡು ರಿಕ್ರಿಯೇಷನ್ ಕ್ಲಬ್‍ಗೆ ಬಂಟ್ವಾಳ ನಗರ ಪೊಲೀಸರು ದಾಳಿ ನಡೆಸಿ 130ಕ್ಕೂ  ಅಧಿಕ ಮಂದಿಯನ್ನು ವಶ ಪಡಿಸಿರುವ ಘಟನೆ ಭಾನುವಾರ ಸಂಜೆ ನಡೆದಿದೆ.   ಜುಗಾರಿ ಹಾಗೂ ಇನ್ನಿತರ ಪರವಾನಗಿರಹಿತ ವಿಡೀಯೊ ಗೇಮ್‍ಗಳನ್ನು ಆಡುತ್ತಿರುವ ಶಂಕೆ ಯ ಹಿನ್ನಲೆಯಲ್ಲಿ ಈ ದಾಳಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಬಂಟ್ವಾಳ ಎಎಸ್ಪಿ ಸೈದುಲ್ ಅದಾವತ್ ಅವರ ನೇತೃತ್ವದಲ್ಲಿ ನಗರ ಠಾಣೆಯ ಎಸ್ ಐ ಚಂದ್ರ ಶೇಖರ್ ಮತ್ತವರ ತಂಡ ಪೊಲೀಸರು ಎರಡು ವಾಣಿಜ್ಯ ಸಂಕೀರ್ಣಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.               

ಈ ಸಂದರ್ಭ ಎರಡು ಕ್ಲಬ್ ನಲ್ಲಿದ್ದ ಒಟ್ಟುಸುಮಾರು 130ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಅಲ್ಲದೆ ನಗದು,ಮೊಬೈಲ್,ಇಸ್ಪೀಟ್ ಎಲೆ ಮತ್ತಿತರ ಸೊತ್ತುಗಳನ್ನು ವಶ ಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *