Header Ads
Header Ads
Breaking News

ಬಂಟ್ವಾಳ: ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಮುಕ್ತ ಸಂವಾದ ಕಾರ್ಯಕ್ರಮ

ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ಇದರ ಆಶ್ರಯದಲ್ಲಿ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇದರ ಮನೋರೋಗ ಚಿಕಿತ್ಸಾ ವಿಭಾಗದ ವತಿಯಿಂದ ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಮುಕ್ತ ಸಂವಾದ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮನೋರೋಗ ಆಪ್ತಸಮಾಲೋಚಕಿ ಸುಮನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ನಕರಾತ್ಮಕ ಯೋಚನೆಗಳು ನಮ್ಮ ಬದುಕಿನಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಕರಾತ್ಮಕ ಯೋಚನೆಗಳು ಸರಿಯಾದ ದಾರಿಯನ್ನು ತೋರಿಸಿಕೊಡುತ್ತದೆ ಎಂದರು.ಕೋಪ, ಭಯ, ಒತ್ತಡಗಳು ಉಂಟಾದಾಗ ಯಾವುದೇ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳದೆ ಮನಸ್ಸನ್ನು ನಿರಾಳಗೊಳಿಸ ಬೇಕು. ಮನಸ್ಸಿಗೆ ಸಾಮರ್ಥ್ಯ ಕ್ಕಿಂತ ಹೆಚ್ಚು ಒತ್ತಡ ನೀಡಬಾರದು. ಬದಕಿನಲ್ಲಿ ಎದುರಾಗುವ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಲು ಮಾನಸಿಕ ಆರೋಗ್ಯ ಉತ್ತಮವಾಗಿರ ಬೇಕು ಎಂದರು. 4ಸಾವಿರಕ್ಕಿಂತಲೂ ಅಧಿಕ ಮಾನಸಿಕ ಕಾಯಿಲೆಗಳಿವೆ, ಹೆಚ್ಚಿನ ಮಾನಸಿಕ ಕಾಯಿಲೆಗಳನ್ನು ಗುಣ ಪಡಿಸಲು ಸಾಧ್ಯವಿದೆ. ಮಾನಸಿಕವಾಗಿ ಖಿನ್ನತೆಗೊಳಗಾದಗ ಬೇರೆ ಬೇರೆ ಹವ್ಯಾಸ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ತಿಳಿಸಿದರು.ಧಾರ್ಮಿಕ ಪರಿಷತ್ತಿನ ಸದಸ್ಯ ಜಗನ್ನಾಥ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಾವು ಮಾನಸಿಕ ಅಸ್ವಸ್ಥರಾಗಲು ನಾವೇ ಕಾರಣ. ಸುಳ್ಳು ಹೇಳುವ ಪರಿಪಾಠವನ್ನು ಬೆಳೆಸಿಕೊಂಡರೆ ಅದೇ ನಮ್ಮ ಬದುಕಿಗೆ ಮಾರಕವಾಗಿ ಪರಿಣಮಿಸಲಿದೆ ಎಂದರು. ಭೂತ ಕಾಲದ ಬಗ್ಗೆ ಅರಿತುಕೊಂಡು ವರ್ತಮಾನದಲ್ಲಿ ಉತ್ತಮವಾಗಿ ಬದುಕಿದರೆ ಭವಿಷ್ಯವೂ ಚೆನ್ನಗಿರಲು ಸಾಧ್ಯವಿದೆ ಎಂದು ತಿಳಿಸಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತುಂಬೆ ವಲಯದ ಚಂದ್ರಶೇಖರ, ಕಮಲಾಕ್ಷಿ ಧರ್ಮಗಿರಿ ಹಾಜರಿದ್ದರು.

Related posts

Leave a Reply