Header Ads
Breaking News

ಬಂಟ್ವಾಳ ಲೋರೆಟ್ಟೊ ಮಾತಾ ಚರ್ಚ್‌ನ ವಾರ್ಷಿಕ ಹಬ್ಬ : ಭಕ್ತಿಪೂರ್ವಕ, ಶ್ರದ್ಧೆಯಿಂದ ನಡೆದ ಪರಮ ಪ್ರಸಾದದ ಮೆರವಣಿಗೆ

ಬಂಟ್ವಾಳ; ಲೋರೆಟ್ಟೊ ಮಾತಾ ಚರ್ಚ್‌ನ ವಾರ್ಷಿಕ ಹಬ್ಬದ ಪ್ರಯುಕ್ತ ಪರಮ ಪ್ರಸಾದದ ಮೆರವಣಿಗೆ ಬಹಳ ಭಕ್ತಿಪೂರ್ವಕ ವಾಗಿ,ಶ್ರದ್ಧೆಯಿಂದ, ಅದ್ದೂರಿಯಾಗಿ ನಡೆಯಿತು.ಮಂಗಳೂರು ಧರ್ಮಪ್ರಾ೦ತ್ಯದ ಜೆಪ್ಪು ಸಂತ ಜೋಸಫ್ ಸೆಮಿನರಿಯ ರೆಕ್ಟರ್ ರಾಗಿರುವ ವಂ. ಆಂಟನಿ ಪಿಂಟೊ ರವರು ಪ್ರಧಾನ ಧರ್ಮಗುರುಗಳಾಗಿ ನೂರಾರು ಭಕ್ತಾದಿಗಳೂ೦ದಿಗೆ ಬಲಿಪೂಜೆಯನ್ನು ಅರ್ಪಿಸಿದರು. ಚರ್ಚ್ ನ ಧರ್ಮಗುರುಗಳಾದ ವಂ. ಎಲಿಯಸ್ ಡಿಸೋಜಾ, ವಂ. ಅನಿಲ್ ಫೆರ್ನಾಂಡಿಸ್, ಬಲಿಪುಜೆಯಲ್ಲಿ ಪಾಲ್ಗೊಂಡರು. ಅಲಂಕರಿತ ಜೇಪೀನಲ್ಲಿ  ಚ ರ್ಚ್ ನಿಂದ ಆರಂಭಗೊಂಡ ಪರಮ ಪ್ರಸಾದದ ಮೆರವಣಿಗೆ ಬ್ಯಾಂಡ್ ವಾದ್ಯ, ಪಾಟಾಕಿಗಳ ಸಡಗರದೊಂದಿಗೆ ಲೋರೆಟ್ಟೊ ಅಂಚೆ ಕಛೇರಿ ಯಿಂದ ಲೋರೆಟ್ಟೊ ಪದವ್ ಮೂಲಕ ಚರ್ಚ್‌ಗೆ ಬಂದು ಕೊನೆಗೊಂಡಿತು. ಇದೇ ಸಂದರ್ಭದಲ್ಲಿ ಚರ್ಚ್ ವ್ಯಾಪ್ತಿಯ ಎಲ್ಲಾ ಕ್ರೈಸ್ತ ಕುಟುಂಬಗಳಿಗೆ ಗೌರವ ಪೂರ್ವಕವಾಗಿ ಮೇಣದ ಬತ್ತಿ ಯನ್ನು ವಿತರಿಸಲಾಯಿತು. ಬಲಿಪುಜೆಯಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಪಪ್ಸ್ ಹಾಗೂ ತಂಪು ಪಾನೀಯವನ್ನು ವಿತರಿಸಲಾಯಿತು.ಈ ಕಾರ್ಯಕ್ರಮವನ್ನು ಚರ್ಚ್ ಪಾಲನಾ ಮಂಡಳಿ ಭಕ್ತಿ, ಶಿಸ್ತು ಬದ್ಧವಾಗಿ ಆಯೋಜಿಸಿತ್ತು.

Related posts

Leave a Reply

Your email address will not be published. Required fields are marked *