Header Ads
Header Ads
Breaking News

ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ:ನೂತನ ಸಾಧನ ಸಹಕಾರಿ ಸಂಕೀರ್ಣದ ಉದ್ಘಾಟನೆ

ಬಂಟ್ವಾಳ: ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ ಸರಪಾಡಿಯ ಮಾವಿನಕಟ್ಟೆಯ ಸ್ವಂತ ನಿವೇಶನದಲ್ಲಿ ನಿರ್ಮಿಸಿದ ನೂತನ ಸಾಧನ ಸಹಕಾರಿ ಸಂಕೀರ್ಣದ ಉದ್ಘಾಟನೆ ಹಾಗೂ ಮಾವಿನಕಟ್ಟೆ ಶಾಖೆಯ ಸ್ಥಳಾಂತರ ಸಮಾರಂಭ ಗುರುವಾರ ಸಂಜೆ ನಡೆಯಿತು.ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಸಾಧನ ಸಹಕಾರಿ ಸಂಕೀರ್ಣವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ಮಂಜುನಾಥ ರೈ ಅಗರಿ ದೀಪ ಪ್ರಜ್ವಲಿಸಿದರು. ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಬಳಿಕ ನಡೆದ ಗ್ರಾಹಕರ ಸಮಾವೇಶದದಲ್ಲಿ ಅಧ್ಯಕ್ಷತೆ ವಹಿಸಿದ್ದ ಸುಭಾಶ್ಚಂದ್ರ ಜೈನ್ ಮಾತನಾಡಿ ಅಂಬೆಗಾಲಿಡುತ್ತಾ ಸಾಗುತ್ತಿರುವ ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಮಾವಿನಕಟ್ಟೆಯಲ್ಲಿ ಸ್ವಂತ ಕಟ್ಟಡವನ್ನು ಹೊಂದುವ ಮೂಲಕ ಮೊದಲ ಹೆಜ್ಜೆಯನ್ನು ಗಟ್ಟಿಯಾಗಿ ಊರಿದೆ. ಮುಂದಿನ ದಿನಗಳಲ್ಲಿ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಕೇಂದ್ರ ಕಚೇರಿಗೂ ಸ್ವಂತ ಹಾಗೂ ಸುಸಜ್ಜಿತ ಕಟ್ಟಡ ಹೊಂದುವ ಚಿಂತನೆ ಇದ್ದು ಶೀಘ್ರವೇ ಕಾರ್ಯಗತಗೊಳ್ಳಲಿದೆ ಎಂದರು. ಏಳು ಶಾಖೆಗಳನ್ನು ಹೊಂದಿರುವ ಸಂಘದ ಮುಂದಿನ ಶಾಖೆಯನ್ನು ವಾಮದಪದವಿನಲ್ಲಿ ತೆರಯಲು ಸಿದ್ದತೆಗಳು ನಡೆಯುತ್ತಿದೆ, ಸಂಸ್ಥೆಯನ್ನು ಗಟ್ಟಿಗೊಳಿಸುವುದರ ಜೊತೆಗೆ ಅದರ ಲಾಭಾಂಶದಲ್ಲಿ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ, ಗ್ರಾಹಕರ ಸಹಕಾರ ಇದ್ದಾಗ ಸಹಕಾರಿ ಸಂಘಗಳು ಬಲಿಷ್ಠವಾಗಿ ಬೆಳೆಯಲು ಸಾಧ್ಯವಿದೆ ಎಂದು ತಿಳಿಸಿದರು.ಯಕ್ಷಗಾನ ಕಲಾವಿದ ಅಶೋಕ್‌ಶೆಟ್ಟಿ ಸರಪಾಡಿ ಮಾತನಾಡಿ ಗ್ರಾಮದ ಅಭಿವೃದ್ದಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಮಹತ್ತರವಾದುದು, ಗ್ರಾಮಸ್ಥರ ಪೂರಕ ಸಹಕಾರದಿಂದಾಗಿ ಮಾವಿನಕಟ್ಟೆ ಶಾಖೆಯಲ್ಲಿ ಉತ್ತಮವಾಗಿ ಆರ್ಥಿಕ ವ್ಯವಹಾರ ನಡೆಯುತ್ತಿದೆ ಎಂದರು. ಗ್ರಾಮಸ್ಥರಿಗೆ ಆರ್ಥಿಕ ಸಹಕಾರ ಪಡೆಯಲು ವರ್ತಕರ ಸಹಕಾರಿ ಸಂಘದಿಂದ ಸಾಧ್ಯವಾಗಿದ್ದು ಶೀಘ್ರವೇ ೮ನೇ ಶಾಖೆ ಆರಂಭಗೊಳ್ಳಲಿ ಎಂದು ಶುಭಹಾರೈಸಿದರು.
ಸರಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಶೆಟ್ಟಿ ಮಾತನಾಡಿ ಸಹಕಾರಿ ಸಂಘದ ಸ್ಥಾಪನೆಯಿಂದ ಗ್ರಾಮದ ಅಭಿವೃದ್ದಿಯೂ ಸಾಧ್ಯವಾಗಿದೆ. ಸಂಘವೂ ಇನ್ನಷ್ಟು ಶಾಖೆಗಳನ್ನು ತೆರಯುವ ಮೂಲಕ ಅಭಿವೃದ್ದಿಯ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣದ ಗುತ್ತಿಗೆದಾರರಾದ ಪದ್ಮನಾಭ ಹಾಗೂ ಸ್ಟ್ಯಾನಿಲೋಬೋ ಅವರನ್ನು ಸನ್ಮಾನಿಸಲಾಯಿತು.

ಬಾಚಕರೆ ಶ್ರೀ ದುರ್ಗಾ ದೇವಸ್ಥಾನದ ಮೋಕ್ತೇಸರ ದೇಜಪ್ಪ, ಉದ್ಯಮಿ ರಾಧಕೃಷ್ಣ ರೈ, ಪ್ರಮುಖರಾದ ಶಶಿಕಾಂತ್ ಶೆಟ್ಟಿ ಆರುಮುಡಿ, ಪಂಚಾಯತ್ ಸದಸ್ಯ ಆದಂಕುಂಞ, ಮಾವಿನಕಟ್ಟೆ ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಕಸ್ತೂರಿ ಬಿ., ಶ್ರೀಧರ ರೈ, ಕೃಷ್ಣ ನಾಯ್ಕ, ಸಂಘದ ನಿರ್ದೇಶಕರಾದ ಸಪ್ನರಾಜ್, ರಾಜೇಶ್ ಬಿ., ಜೆ.ಗಜೇಂದ್ರ ಪ್ರಭು, ದಿವಾಕರದಾಸ್, ಸುಧಾಕರ ಸಾಲ್ಯಾನ್ ವಿಜಯಕುಮಾರಿ ಇಂದ್ರ, ಮೈಕಲ್ ಡಿಕೋಸ್ತಾ, ಹೇಮಂತ್ ಕುಮಾರ್ ಜೈನ್, ರವೀಂದ್ರ, ನಾರಾಯಣ ಸಿ.ಪೆರ್ನೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್‌ಕುಮಾರ್ ಜೈನ್, ಹಾಜರಿದ್ದರು.

Related posts

Leave a Reply

Your email address will not be published. Required fields are marked *