Header Ads
Header Ads
Header Ads
Breaking News

ಬಂಟ್ವಾಳ : ವಿವಿಧ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮ

ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 1.55 ಕೋಟಿ ರೂ. ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಅಪೆಂಡಿಕ್ಸ್ ಇ ಯೋಜನೆಯಲ್ಲಿ 50 ಲಕ್ಷ ರೂ.ಅನುದಾನ ಮತ್ತು 2018-19 ನೇ ಸಾಲಿನ ಜಿಲ್ಲಾ ಮತ್ತು ಇತರ ರಸ್ತೆ ಸುಧಾರಣೆಗಳು ಲೆಕ್ಕಶೀರ್ಷಿಕೆಯಲ್ಲಿ 40 ಲಕ್ಷ ರೂ. ವೆಚ್ಚದ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಬಜ-ಬಲಯೂರು ಕಾಂಕ್ರಿಟ್ ಮತ್ತು ಡಾಮರು ರಸ್ತೆ ಕಾಮಗಾರಿಗೆ ಬಜದಲ್ಲಿ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಬಹಳ ಬೇಡಿಕೆಯ ಬಜ ಬಲಯೂರು ರಸ್ತೆಗೆ ಸ್ವಲ್ಪ ಭಾಗ ಡಾಮರೀಕರಣ ಮತ್ತು ಉಳಿದ ಭಾಗವನ್ನು ಕಾಂಕ್ರೀಟೀಕರಣ ನಡೆಸಲು ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರವಾಗಿ ಕಾಮಗಾರಿ ನಡೆಸಲು ಸೂಚಿಸಲಾಗಿದೆ ಎಂದರು. ಮಳೆ ಮತ್ತಿತರ ಕಾರಣಗಳಿಂದ ರಸ್ತೆ ಕೆಡುತ್ತಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣ ನಡೆಸಲು ಉದ್ದೇಶಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಸರಪಾಡಿ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಸದಸ್ಯರಾದ ಎನ್.ಧನಂಜಯ ಶೆಟ್ಟಿ, ಬೇಬಿ, ತಾರಾವತಿ, ¥ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *