Header Ads
Header Ads
Breaking News

ಬಂಟ್ವಾಳ: ಸಾಯಿಲೀಲಾ ವೆಜ್ ರೆಸ್ಟೋರೆಂಟ್‌ಗೆ ವಾರ್ಷಿಕ ಸಂಭ್ರಮ

ಬಿ.ಸಿ.ರೋಡಿನ ಕೈಕಂಬದಲ್ಲಿರುವ ಸಾಯಿಲೀಲಾ ವೆಜ್ ರೆಸ್ಟೋರೆಂಟ್ ಯಶಸ್ವಿ ಒಂದು ವರ್ಷ ಪೂರೈಸಿದ ಹಿನ್ನೆಯಲ್ಲಿ ಸಂಭ್ರಮಾಚರಣೆ ನಡೆಯಿತು. ಹೊಟೇಲ್ ಗ್ರಾಹಕರು ಹಾಗೂ ಬಂಧು ಮಿತ್ರರು ಆಗಮಿಸಿ ಶುಭಾಶಯ ಕೋರಿದರು. ಒಂದು ವರ್ಷದ ಪೂರೈಸಿದ ಸಂಭ್ರಮಾಚರಣೆಯ ಅಂಗವಾಗಿ ಹೊಟೇಲ್‌ಗೆ ಬಂದ ಎಲ್ಲಾ ಗ್ರಾಹಕರಿಗೆ ಉಚಿತ ಉಪಹಾರ ಕಲ್ಪಿಸಲಾಗಿತ್ತು. 

ಕ್ಯಾಟರಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಸದಾನಂದ ಬಂಗೇರ ಹಾಗೂ ಇಂಜಿನಿಯರ್ ಪ್ರಕಾಶ್ ಅವರು ಜತೆಗೂಡಿ ಗ್ರಾಹಕರ ಅಪೇಕ್ಷೆಯನ್ನು ಮನಗಂಡು ಕೈಕಂಬದಲ್ಲಿ ಕಳೆದ ವರ್ಷ ಜುಲೈ12ರಂದು ಸಾಯಿಲೀಲ್ ವೆಚ್ ರೆಸ್ಟೋರೆಂಟ್ ನ್ನು ಆರಂಭಿಸಿದ್ದರು. ಚಿತ್ರನಟ ಭೋಜರಾಜ್ ವಾಮಂಜೂರು ಹಾಗೂ ಮತ್ತಿತರ ಗಣ್ಯರಿಂದ ಉದ್ಘಾಟನೆಗೊಂಡಿದ್ದ ಸಾಯಿಲೀಲಾ ಹೊಟೇಲ್ ಕಡಿಮೆ ಅವಧಿಯಲ್ಲಿ ಜನಮೆಚ್ಚುಗೆಗೆ ಪಾತ್ರವಾಗಿದೆ. ತುಳುನಾಡಿನ ತಿಂಡಿ ತಿನಿಸಿಗಳು, ಬಗೆ ಬಗೆಯ ಖಾದ್ಯಗಳ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದು ಶುಚಿ ರುಚಿಯಾದ ಊಟೋಪಾಚಾರ, ಬಗೆ ಬಗೆಯ ಹಣ್ಣಿನ ಜ್ಯೂಸ್, ಐಸ್‌ಕ್ರೀಂಗಳು ಇಲಲಿ ಲಭ್ಯವಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ತುಳುನಾಡಿನ ಹಳ್ಳಿಗಳಲ್ಲಿ ಸಿಗುವ ಪತ್ರೋಡೆ, ಹಲಸಿನ ಗಟ್ಟಿ, ಬಾಳೆ ಎಲೆ ಗಟ್ಟಿ, ಗೋಳಿ ಎಲೆ ಗಟ್ಟಿ, ಪುಂಡಿ ಗಸಿ, ಬಸಳೆ ಪುಂಡಿ ಮೊದಲಾದ ತಿಂಡಿಗಳು ಸಾಯಿ ಲೀಲಾ ವೆಜ್ ರೆಸ್ಟೋರೆಂಟ್‌ನಲ್ಲಿ ಲಭ್ಯವಿರುವುದರಿಂದ ಇದು ಇತರ ಹೊಟೇಲ್‌ಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಇಲ್ಲಿ ಸಿಗುವ ವಿಶಿಷ್ಟ ತಿಂಡಿಗಳಿಗಾಗಿ, ಶುಚಿ ರುಚಿಯಾದ ಊಟಕ್ಕಾಗಿ ಗ್ರಾಹಕರು ಸಾಯಿಲೀಲಾ ಹೊಟೇಲನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕುಟುಂಬ ಸಮೇತರಾಗಿ ಊಟ ಉಪಹಾರ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮುಂದಿನ ದಿನಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಪ್ರತ್ಯೇಕ ಫ್ಯಾಮಿಲ್ ಕೊಠಡಿ ಆರಂಭಗೊಳ್ಳಲಿದೆ ಎಂದು ಮಾಲಕ ಸದಾನಂದ ಬಂಗೇರ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *