Header Ads
Header Ads
Header Ads
Breaking News

ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮ ಬಿ.ಸಿ.ರೋಡು ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಸುವರ್ಣ ಕೇದಗೆ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಸನಾತನ ಹಿಂದೂ ಧರ್ಮ ಮತ್ತೆ ಅಭ್ಯುದಯವಾಗಬೇಕಾದರೆ ಎಲ್ಲರೂ ವಿಶ್ವ ಪ್ರೇಮದ ಸಂದೇಶವನ್ನು ಅನುಸರಿಸಬೇಕು, ಸ್ವೀಕಾರಕ್ಕೆ ಅರ್ಹವಾದ ವಿಚಾರವೇ ಧರ್ಮ, ಧರ್ಮದ ವಿಚಾರಗಳನ್ನು ಸಮಾಜಕ್ಕೆ ತೋರಿಸಿಕೊಟ್ಟವರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದರು.
ಎಲ್ಲಾ ಜಾತಿ ಜನಂಗವನ್ನು ಒಂದೇ ತೆಕ್ಕೆಯಲ್ಲಿ ಕೊಂಡೊಯ್ದಾಗ ಮಾತ್ರ ನಾರಯಣ ಗುರುಗಳ ತತ್ವ, ಸಿದ್ದಾಂತಗಳು ಅನುಷ್ಠಾನಗೊಳ್ಳುತ್ತದೆ. ಸಂಘಟನೆಗಳು ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದು ತಿಳಿಸಿದರು.
ಕೇಂದ್ರ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಮುಂದಿನ ತಿಂಗಳು ಜನವರಿ ೨೬ರಂದು ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರದಲ್ಲಿ ತನ್ನ ಆತ್ಮಚರಿತ್ರೆ ಲೋಕಾರ್ಪಣೆಗೊಳ್ಳಲಿದ್ದು ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಬಳಿಕ ಅವರು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ದಂಪತಿಯನ್ನು ಸನ್ಮಾನಿಸಿದರು. ೫೦ ವರ್ಷಗಳ ಅವಧಿಯಲ್ಲಿ ಬಿಲ್ಲವ ಸಂಘವನ್ನು ಮುನ್ನಡೆಸಿದ ಅಧ್ಯಕ್ಷರುಗಳನ್ನು ಗೌರವಿಸಿದರು.


ಸಂಘದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಪ್ರಸ್ತಾವನೆ ನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆದವರು ಬಿ.ಜನಾರ್ದನ ಪೂಜಾರಿಯವರು. ಕುದ್ರೋಳಿ ಗೋಕರ್ಣ ಕ್ಷೇತ್ರದ ಮೂಲಕ ಎಲ್ಲಾ ವರ್ಗದ ಜನರಿಗೂ ಸಮಾನ ಅವಕಾಶವನ್ನು ಒದಗಿಸಿಕೊಟ್ಟವರು ಎಂದು ತಿಳಿಸಿದರು. ಜನಾರ್ದನ ಪೂಜಾರಿ ಎನ್ನುವ ಹೆಮ್ಮರದಡಿ ಅನೇಕ ಮಂದಿ ನೆರಳನ್ನು ಪಡೆದಿದ್ದಾರೆ. ಹಲವಾರು ಜನ ರಾಜಕೀಯ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಮದುವೆ ಸಮಾರಂಭವೊಂದರಲ್ಲಿನ ಅವರನ್ನು ಹೀನಾಯವಾಗಿ ಹೀಯಾಳಿಸಿದಾಗ ಬಿಲ್ಲವರು ಅದನ್ನು ಪ್ರಶ್ನೆ ಮಾಡಿಲ್ಲ. ಬಿಲ್ಲವರ ಏಳಿಗೆಗಾಗಿ ಜನಾರ್ದನ ಪೂಜಾರಿ ಶ್ರಮಿಸಿದರೂ ಬಿಲ್ಲವರು ಅವರಿಗೆ ಏನು ಕೊಟ್ಟಿದಾರೆ ಎಂದು ಪ್ರಶ್ನಿಸಿದರು. ಈ ಸಂದರ್ಭ ಗದ್ಗದಿತರಾದ ಜನಾರ್ದನ ಪೂಜಾರಿ ಕಣ್ಣೀರು ಸುರಿಸಿದರು. ಹಣದ ಹಿಂದೆ ಹೋಗುವ ಬದಲು ಜನಶಕ್ತಿಯನ್ನು ಸಂಪಾದಿಸಿ ಎಂದು ಕಿವಿ ಮಾತು ಹೇಳಿದ ಅವರು ಕೋಮುವಾದಿ ಸಮಾಜವನ್ನು ಜಾತ್ಯಾತೀತ ಸಮಾಜವಾಗಿ ಕಟ್ಟಲು ಮಹಿಳೆಯರಿಂದ ಮಾತ್ರ ಸಾಧ್ಯ ಎಂದರು.

ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಬೇಬಿ ಕುಂದರ್, ಉಪಾಧ್ಯಕ್ಷ ರಾಘವ ಅಮೀನ್, ಕೋಶಾಧಿಕಾರಿ ರಮೇಶ್ ತುಂಬೆ , ಜತೆ ಕಾರ್ಯದರ್ಶಿ ಶಂಕರ್ ಕಾಯರ್ ಮಾರ್, ಲೆಕ್ಕ ಪರಿಶೋಧಕ ಸತೀಶ್, ಮಹಿಳಾ ಸಮಿತಿ ಅಧ್ಯಕ್ಷೆ ಕುಂದರ್ ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮದ ಅಮಗವಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಮುಂಜಾನೆಯಿಂದ ಗಣಪತಿ ಹೋಮ, ತತ್ವಕಲಶಾಭಿಷೇಕ, ಪರಕಲಶಾಭಿಷೇಕ, ಕುಂಭೇಶ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply