Header Ads
Header Ads
Breaking News

ಬಂಟ್ವಾಳ: ವನ್ಯಪ್ರಾಣಿ ಭೇಟೆಗೆ ಯತ್ನಿಸುತ್ತಿದ್ದ ಭೇಟೆಗಾರರ ಬಂಧನ

ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು ಗ್ರಾಮದ ಕೊಡ್ಯಮಲೆ ಮೀಸಲು ಅರಣ್ಯದ ಮಯ್ಯಿದೊಟ್ಟು ಎಂಬಲ್ಲಿ ಕಾಡಿಗೆ ಅಕ್ರಮ ಪ್ರವೇಶ ಮಾಡಿ ವನ್ಯಪ್ರಾಣಿ ಭೇಟೆಗೆ ಯತ್ನಿಸುತ್ತಿದ್ದ ಭೇಟೆಗಾರನ್ನು ಬಂಟ್ವಾಳ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸರಪಾಡಿ ಗ್ರಾಮದ ಸುಲೈಮಾನ್, ಅಹಮ್ಮದ್ ಶರೀಫ್, ಝೈನುದ್ದೀನ್ ಹಾಗೂ ದೇವಸ್ಯ ಪಡೂರು ಗ್ರಾಮದ ಅಬ್ದುಲ್ ಕುಂಞ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಕೋವಿ ಹಾಗೂ ಅದರ ಪರಿಕರಗಳು1 ಚಾಕು ಹಾಗೂ2 ಬೈಕುಗಳನ್ನು ಮುಟ್ಟುಗೋಲು ಹಾಕಲಾಗಿದೆ. ಈ ಕಾರ್ಯಚರಣೆಯಲ್ಲಿ ಬಂಟ್ವಾಳ ವಲಯದ ವಲಯಾರಣ್ಯಧಿಕಾರಿ ಸುರೇಶ್ ಬಿ., ಉಪವಲಯಾರಣ್ಯಧಿಕಾರಿ ಅನಿಲ್ ಕೆ, ಅರಣ್ಯ ರಕ್ಷಕರಾದ ಲಕ್ಷ್ಮೀನಾರಾಯಣ, ಮನೋಜ್, ಜಿತೇಶ್, ವಿನಯ್‌ಜಯರಾಮ ಪಾಲ್ಗೊಂಡಿದ್ದರು. ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಲನ್ ಅವರ ಮಾರ್ಗದರ್ಶನದಂತೆ ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರ ಲಿಂಗೇಗೌಡ ನಡೆಸಲಿದ್ದಾರೆ.

Related posts

Leave a Reply