Header Ads
Header Ads
Breaking News

ಬಂಟ್ಸ್‌ಹಾಸ್ಟೆಲ್ ಶ್ರೀರಾಮಕೃಷ್ಣ ಶಾಲೆಯ ವಾರ್ಷಿಕೋತ್ಸವ ಹಿನ್ನೆಲೆ:ಮಕ್ಕಳಿಗಾಗಿ ಪುಷ್ಪ ವಿನ್ಯಾಸ ಸ್ಪರ್ಧೆ

 ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗಾಗಿ ಅನೇಕ ಸ್ಪರ್ಧೆಗಳನ್ನ ಆಯೋಜಿಸಲಾಗಿದೆ. ಈ ಪೈಕಿ ಇಂದು ಮಕ್ಕಳಿಗೆ ಪುಷ್ಪ ವಿನ್ಯಾಸ ಸ್ಪರ್ಧೆ ನಡೆಯಿತು. ಹತ್ತಾರು ಪುಟಾಣಿಗಳು ಸಂಭ್ರಮದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪೈಕಿ ಒಂದಾಗಿರುವ, ಬಂಟ್ಸ್ ಹಾಸ್ಟೆಲನಲ್ಲಿರುವ ರಾಮಕೃಷ್ಣ ಶಾಲೆಯಲ್ಲಿ ಇದೀಗ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ, ಮಕ್ಕಳಲ್ಲಿ ಸುಪ್ತವಾಗಿರುವಂತಹ ಪ್ರತಿಭೆಗಳನ್ನು ಹೊರತೆಗೆಯುವ ಪ್ರಯತ್ನ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ಈ ಬಾರಿ ಕೂಡ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಲಾಗಿದೆ.ಮಂಗಳೂರಿನ ಬಂಟ್ಸ್ ಹಾಸ್ಟೆಲನಲ್ಲಿರುವ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಇಂದು ಮಕ್ಕಳು ಪುಷ್ಪ ವಿನ್ಯಾಸ ಸ್ಪರ್ಧೆ ನಡೆಯಿತು. ಶಾಲೆಯ ಹತ್ತಾರು ವಿದ್ಯಾರ್ಥಿಗಳು ಪುಷ್ಪ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದರು. ಇನ್ನು ಈ ಬಗ್ಗೆ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಉಷಾ ಶೆಟ್ಟಿ, ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾದ ಹತ್ತಾರು ಸ್ಪರ್ಧೆಗಳನ್ನು ಶಾಲೆಯು ನಡೆಸಿಕೊಂಡು ಬರ್ತಾ ಇದೆ. ವಿಜ್ಙಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವಲ್ಲಿ ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದು ಹೇಳಿದರು.  ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳ ಮೂಲಕ ರೂಪುಗೊಂಡ ಪುಷ್ಪ ವಿನ್ಯಾಸ ಎಲ್ಲರ ಗಮನ ಸೆಳೆಯಿತು.

Related posts

Leave a Reply