Header Ads
Header Ads
Breaking News

ಬಂಟ್ಸ್ ಬಹರೈನ್‌ಗೆ ನೂತನ ಆಡಳಿತ ಮಂಡಳಿ,  ವಿದ್ಯುಕ್ತ ಪದಗ್ರಹಣಕ್ಕೆ ಸಂಭ್ರಮದ ಸಿದ್ಧತೆ


ಹನ್ನೆರಡು ವರುಷಗಳ ಹಿಂದೆ ದ್ವೀಪದ ಬಂಟ ಸಮುದಾಯದ ನೋವು ನಲಿವುಗಳಿಗೆ ಸ್ಪಂದಿಸಲು ಅಸ್ತಿತ್ವಕ್ಕೆ ಬಂದಂತಹ ಬಹರೈನ್ ದ್ವೀಪದ ಅನಿವಾಸಿ ಬಂಟ ಸಮುದಾಯದ ಸಂಘಟನೆಯಾದ “ಬಂಟ್ಸ್ ಬಹರೈನ್”ಗೆ ಈಗ ಹದಿಮೂರರ ಸಂಭ್ರಮ. ಈ ನಿಟ್ಟಿನಲ್ಲಿ ೨೦೧೭-೨೦೧೮ರ ಸಾಲಿನ ನೂತನ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜೂನ್ ೨೨ರಂದು ಪದಗ್ರಹಣಕ್ಕೆ ಸಂಭ್ರಮದ ಸಿದ್ಧತೆ ನಡೆಯುತ್ತಿದೆ.
ಈ ಹದಿಮೂರು ವರುಷಗಳಲ್ಲಿ ಸಂಘಟನೆಯು ದ್ವೀಪದ ಅನಿವಾಸಿ ಬಂಟರನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ ನಾಂದಿ ಹಾಡಿದೆ. ನಾಡಿನ ಹಾಗು ದ್ವೀಪದ ಸಮಾಜ ಬಾಂದವರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಸಾರ್ಥಕತೆಯನ್ನು ಕಂಡಿದೆ. ಇದೀಗ ಸಂಘಟನೆಯ ಹದಿಮೂರನೇ ವರುಷದ ಚುಕ್ಕಾಣಿಯನ್ನು ಹಿಡಿಯಲು ನೂತನ ಆಡಳಿತ ಮಂಡಳಿಯು ಆಯ್ಕೆಗೊಂಡಿದ್ದು ದ್ವೀಪದ ಅನಿವಾಸಿ ಬಂಟ ಸಮುದಾಯದ ಹಿರಿಯ ಸದಸ್ಯ ನಾಗೇಶ್ ಶೆಟ್ಟಿಯವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Related posts

Leave a Reply