Header Ads
Breaking News

ಬಚ್ಚಿಟ್ಟ ದಲಿತ ಚರಿತ್ರೆ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ

ಕುರ್ಮಾ ಪ್ರಾಯೋಜಕತ್ವದಲ್ಲಿ ಲೇಖಕರಾದ ರಾಕೇಶ್ ಶೆಟ್ಟಿ ಅವರು ಬರೆದ ಮುಚ್ಚಿಟ್ಟ ದಲಿತ ಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.ಹಿರಿಯ ಪತ್ರಕರ್ತರಾದ ಗುರುವಪ್ಪ ಬಾಳೆಪುಣಿ ಈ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜೋಗೇಂದ್ರನಾಥ್ ಮಂಡಲ್ ಅಂಬೇಡ್ಕರರಿಗೆ ಸರಿಸಮಾನವಾದ ವ್ಯಕ್ತಿಯಾಗಿದ್ದರು ಮೊತ್ತಮೊದಲ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿದ್ದ ಜೋಗೇಂದ್ರನಾಥ್ ಮಂಡಲ್ ಅವರು ಪೂರ್ವ ಪಾಕಿಸ್ತಾನದ ಅಂಬೇಡ್ಕರ್ ಎಂದು ಸಮೀಕರಿಸಿಸಬಹುದು ಅವರ ಚರಿತ್ರೆಯನ್ನು ಯಾಕೆ ಬಚ್ಚಿಟ್ಟರೂ ಎನ್ನುವುದೇ ಪ್ರಶ್ನೆಯಾಗಿದೆ. ಚರಿತ್ರೆಯಲ್ಲಿ ಇರುವ ಒಬ್ಬ ಶ್ರೇಷ್ಠ ದಲಿತನನ್ನು ಪರಿಚಯಿಸುವ ದೊಡ್ಡ ಕೆಲಸ ಮಾಡಿದ್ದಾರೆ ನಮ್ಮ ರಾಕೇಶ್ ಶೆಟ್ಟಿ ಅವರು ಎಂದು ಹೇಳಿದರು.

ಲೇಖಕರಾದ ರಾಕೇಶ್ ಶೆಟ್ಟಿ ಅವರು ಮಾತನಾಡಿ ಇತಿಹಾಸ ಅಧ್ಯಯನ ಮಾಡುವುದು ನನ್ನ ಆಸಕ್ತಿ. ನಾನು ಇತಿಹಾಸ ಅಧ್ಯಯನ ಮಾಡುವಾಗ ಎರಡು ವ್ಯಕ್ತಿಗಳ ಬಗ್ಗೆ ಬಹಳ ಕುತೂಹಲ ಹುಟ್ಟಿತು. ಒಬ್ಬರು ಸುಭಾಷ್ಚಂದ್ರಬೋಸ್ ಇನ್ನೊಬ್ಬರು ಜೋಗೇಂದ್ರನಾಥ್ ಮಂಡಲ್. ಇವರ ಇತಿಹಾಸ ನೋಡುವಾಗ ಸತ್ಯಾಂಶದ ಬಗ್ಗೆ ಸಂಶಯ ಕಂಡು ಬರುತ್ತದೆ ಎಂದರು.
ಈ ಸಂದರ್ಭ ಜಿಲ್ಲಾಪಂಚಾಯಯತ್ ಅಧ್ಯಕ್ಷ ದಿನಕರ್ ಬಾಬು, ಪತ್ರಕರ್ತ ಶ್ರೀಕಾಂತ ಶೆಟ್ಟಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *