Header Ads
Header Ads
Breaking News

ಬಜಾಲ್ ಎನೆಲ್ಮಾರ್ ಒಳರಸ್ತೆ ಕಾಂಕ್ರೀಟಿಕರಣಗೊಳಿಸಿ : ಮಂಗಳೂರಿನಲ್ಲಿ ಡಿವೈಎಫ್‌ಐನಿಂದ ಒತ್ತಾಯ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಳಪೆ ವಾರ್ಡಿನ ಬಜಾಲ್ ಎನೆಲ್ಮಾರ್ ಒಳರಸ್ತೆಯ ಡಾಮರು ಸಂಪೂರ್ಣವಾಗಿ ಎದ್ದು ಹೋಗಿ ಇಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಈ ಒಳರಸ್ತೆಯು ಭಾಗಶಃ ಕಾಂಕ್ರಟೀಕರಣಗೊಂಡಿದೆಯಾದರೂ ಇನ್ನುಳಿದ ರಸ್ತೆ ಕಾಂಕ್ರಟೀಕರಣಗೊಳಿಸದೆ ಅರ್ಧದಲ್ಲೇ ಬಿಡಲಾಗಿದೆ. ಈ ರಸ್ತೆಯಲ್ಲೇ ಶಾಲೆಗಳಿದ್ದು ಅಲ್ಲಿಗೆ ತೆರಲುವ ವಿದ್ಯಾರ್ಥಿಗಳು ಬಹಳಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆತರುವ ವೇಳೆ ಹೆತ್ತವರೂ ಈ ಕೆಟ್ಟ ರಸ್ತೆಯಿಂದಾಗಿ ಜಾರಿ ಬಿದ್ದು ಗಾಯಗೊಂಡಿರುವ ಘಟನೆಗಳು ಬಹಳಷ್ಟು ನಡೆದಿವೆ. ಈ ಭಾಗದ ನಿವಾಸಿಗಳೂ ಕೂಡ ಈ ರಸ್ತೆಯಿಂದಾಗಿ ಬಹಳಷ್ಡು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಜಾಲ್ ಎನೆಲ್ಮಾರ್ ಒಳರಸ್ತೆಯನ್ನು ಆದಷ್ಟು ಬೇಗ ಕಾಂಕ್ರಟೀಕರಣಗೊಳಿಸಬೇಕು ಹಾಗೂ ಈ ಕೂಡಲೇ ಕೆಟ್ಟು ಹೋಗಿರುವ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಡಿವೈಎಫ್‌ಐ ಬಜಾಲ್ ಪಕ್ಕಲಡ್ಕ ಘಟಕ ಒತ್ತಾಯಿಸಿದೆ.

Related posts

Leave a Reply