Header Ads
Header Ads
Breaking News

ಬಜೆಟ್‌ನಲ್ಲಿ ಕರಾವಳಿಯ ಕಡೆಗಣನೆ ಪೆಟ್ರೋಲ್, ಡಿಸೇಲ್, ವಿದ್ಯುತ್ ತೆರಿಗೆ ಹೆಚ್ಚಳಕ್ಕೆ ಆಕ್ರೋಶ.

ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಯ ಕಡಗಣೆನೆ, ಪೆಟ್ರೋಲ್, ಡಿಸೆಲ್, ವಿದ್ಯುತ್ ಮೇಲೆ ತೆರಿಗೆ ಹೆಚ್ಚಳವನ್ನು ಖಂಡಿಸಿ ಇಂದು ಉಡುಪಿಯಲ್ಲಿ ನಾಗರೀಕ ಸಮಿತಿ ವಿನೂತನ ಪ್ರತಿಭಟನೆ ನಡೆಸಿತು.ಉಡುಪಿ ನಗರದ ಡಯಾನ ಸರ್ಕಲ್‌ನಿಂದ ಆರಂಭವಾದ ವಿನೂತನ ಪ್ರತಿಭಟನೆಯ ಮೆರವಣಿಗೆ ನಗರ ಪ್ರಮುಖ ಮಾರ್ಗದಲ್ಲಿ ಸಂಚರಿಸಿ ಚಿತ್ತರಂಜನ್ ಸರ್ಕಲ್ ಬಳಿ ಸಮಾಪನಗೊಂಡಿತು. ಎತ್ತಿನಗಾಡಿ, ಕೈಗಾಡಿ, ಸೈಕಲ್ ರಿಕ್ಷಾ ಬಳಸಿ ತಮಟೆ ಬಾರಿಸಿ ವಿಶಿಷ್ಟವಾಗಿ ಸರಕಾರದ ಗಮನ ಸೆಳೆದ ಪ್ರತಿಭಟನಾಕಾರರು ಬಜೆಟ್‌ನಲ್ಲಿ ಪಡಿತರ ಅಕ್ಕಿಯನ್ನು7 ಕೆಜಿಯಿಂದ5 ಕೆಜಿಗೆ ಇಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ತಮಗೆ 10 ಕೆಜಿ ಭಾರ ಹೊರಲೂ ಆಗುತ್ತೆ ಅಂತ ಡೆಮೋ ತೋರಿಸಿದರು. ನಾಗರೀಕ ಸಮಿತಿಯ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು ಅನ್ನಭಾಗ್ಯವನ್ನು ವಿಸ್ತರಿಸಬೇಕು, ಪೆಟ್ರೋಲ್, ಡಿಸೇಲ್ ಸೆಸ್ ಹಾಗೂ ವಿದ್ಯುತ್ ತೆರಿಗೆಯನ್ನೂ ಕಡಿತಮಾಡಬೇಕು ಇಲ್ಲವಾದರೆ ಜಿಲ್ಲಾ ಬಂದ್ ಎಚ್ಚರಿಕೆ ನೀಡಿದರು.

Related posts

Leave a Reply