
ಜನಸಾಮಾನ್ಯರಿಂದ ತೆರೆಗೆ ಕಟ್ಟಿಸಿಕೊಂಡು ಲೂಟಿ ಮಾಡುವ ಈ ಬಾರಿಯ ಕೇಂದ್ರ ಸರಕಾರದ ಬಜೆಟ್ ಸೇಲ್ ಇಂಡಿಯಾ, ಲೂಟ್ ಇಂಡಿಯಾ ಬಜೆಟ್ ಆಗಿದೆ ಎಂದು ಶಾಸಕ ಯು.ಟಿ.ಖಾದರ್ ಲೇವಡಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದೆಡೆ ಜನರಿಂದ ಕೊರೊನಾ ನೆಪದಲ್ಲಿ ತೆರಿಗೆ ಮೂಲಕ ಲೂಟಿ ಮಾಡಿ, ಇನ್ನೊಂಡೆದೆ ದೇಶದ ಸಂಪತ್ತಿನ ಮೂಲಗಳಾದ ಏರ್ಪೊರ್ಟ್, ಸಾರ್ವಜನಿಕ ಬ್ಯಾಂಕ್ಗಳನ್ನು, ಎಲ್ಐಸಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡುವ ಮೂಲಕ ಸೇಲ್ ಇಂಡಿಯಾ ಬಜೆಟ್ ಮಂಡಿಸಿರುವ ಕೇಂದ್ರ ಸರಕಾದ ವಿರುದ್ಧ ಜನಸಾಮಾನ್ಯರು ಮಾತನಾಡುವ ಅಗತ್ಯವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕಾಂಗ್ರೆಸ್ ಮುಖಂಡರಾದ ದುರ್ಗಾಪ್ರಸಾದ್ ರೈ, ಪ್ರಸಾದ್ ಕೌಶಲ್ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ಅಮರನಾಥ ಉಪಸ್ಥಿತರಿದ್ದರು.