Header Ads
Breaking News

ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದ ದುರಂತಕ್ಕೆ 10 ವರ್ಷ : ತಣ್ಣೀರುಬಾವಿಯಲ್ಲಿರುವ ಸ್ಮಾರಕ ಸ್ಥಳದಲ್ಲಿ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮ

ಬಜ್ಪೆ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಮಹಾ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಮೇ 22ರಂದು ಕೂಳೂರು- ತಣ್ಣೀರುಬಾವಿ ರಸ್ತೆಯಲ್ಲಿರುವ ಸ್ಮಾರಕ ಸ್ಥಳದಲ್ಲಿ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.

2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ದುಬೈಯಿಂದ ಬಜ್ಪೆ ಕೆಂಜಾರಿಗೆ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿದ್ದ 8 ಸಿಬ್ಬಂದಿ ಸಹಿತ 166 ಮಂದಿಯ ಪೈಕಿ 158 ಮಂದಿ ಸುಟ್ಟು ಕರಕಲಾಗಿದ್ದರು. ಲ್ಯಾಂಡ್ ಆಗುವ ಸಂದರ್ಭ ರನ್‍ವೇಯಿಂದ ಜಾರಿದ ವಿಮಾನ ಪ್ರಪಾತಕ್ಕೆ ಉರುಳಿ ಸ್ಫೋಟಗೊಂಡಿತ್ತು. ಈ ಪೈಕಿ ಜೀವದ ಹಂಗು ತೊರೆದು ನೆಲಕ್ಕೆ ಜಿಗಿದ 8 ಮಂದಿ ಬದುಕುಳಿದಿದ್ದರು. ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಈ ದುರಂತದಲ್ಲಿ ಮಡಿದ ಕುಟುಂಬಕ್ಕೆ ನಾಡಿನಾದ್ಯಂತ ಶೋಕ ವ್ಯಕ್ತವಾಗಿತ್ತು. ವಿಮಾನ ದುರಂತಕ್ಕೆ ಇಂದಿಗೆ 10 ವರ್ಷ. ಅವರ ಸ್ಮರಣಾರ್ಥ ಸಂಸ್ಮರಣೆ ಕಾರ್ಯಕ್ರಮ ಮಂಗಳೂರಿನ ತಣ್ಣೀರುಬಾವಿ ಸ್ಮಾರಕದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಗೃಹರಕ್ಷಕ ದಳದ ಕಮಾಂಡರ್ ಮುರಳಿ ಮೋಹನ್ ಚೂಂತಾರು, ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಂಸ್ಮರಣೆ ಮಾಡಲಾಯಿತು.

Related posts

Leave a Reply

Your email address will not be published. Required fields are marked *