Header Ads
Breaking News

ಬಡಕುಟುಂಬಕ್ಕೆ ಹರಿದು ಬಂತು ಸೃಹೃದಯರ ನೆರವು

ಪುತ್ತೂರಿನ ಕಡಬದಲ್ಲಿ ಮನಕರಗುವ ಸ್ಟೋರಿಯೊಂದನ್ನ ವಿ4ನ್ಯೂಸ್ ವರದಿ ಮಾಡಿತ್ತು. ಮನೆಯಲ್ಲಿ ಟಿವಿ ಇಲ್ಲದೇ ಚಂದನ ವಾಹಿನಿ ತರಗತಿಗಾಗಿ ಅಣ್ಣ-ತಂಗಿ ಪರದಾಡುತ್ತಿರುವ ವಿಚಾರವನ್ನು ಬೆಳಕಿಗೆ ತಂದಿತ್ತು. ಸದ್ಯ ಸಹೃದಯರ ನೆರವು ಈ ಬಡಕುಟುಂಬಕ್ಕೆ ಹರಿದು ಬಂದಿದೆ. ಕಿರಿಯ ಕುಸುಮ’ ಮಿಷನ್ ಲೀಗ್ ಮಕ್ಕಳ ತಂಡದಿಂದ ಸ್ಮಾರ್ಟ್ ಟಿವಿ ಮತ್ತು ಡಿಟಿಎಚ್ ಸಂಪರ್ಕವನ್ನೂ ಕಲ್ಪಿಸಲಾಗಿದೆ. ರೆವೆಡೆಂಡ್ ಫಾದರ್ ಆದರ್ಶ್ ಜೋಸೆಫ್ ನೇತೃತ್ವದಲ್ಲಿ ಮನೆಗೆ ಭೇಟಿ ನೀಡಿ ಇವುಗಳನ್ನ ಹಸ್ತಾಂತರಿಸಲಾಗಿದೆ. ಅಂದ್ಹಾಗೇ, ಕಡಬ ಶಾಲೆಯ ಹಳೆ ವಿದ್ಯಾರ್ಥಿಗಳು ಸೇರಿ ಕೊರಿಯರ್ ಮೂಲಕ ಬೆಂಗಳೂರಿನಿಂದ ಕಳುಹಿಸಿಕೊಟ್ಟಿರುವುದು ಮಕ್ಕಳ ಮೊಗದಲ್ಲಿ ಸಣ್ಣ ನಗು ಹೊಮ್ಮುವಂತೆ ಮಾಡಿದೆ.

Related posts

Leave a Reply

Your email address will not be published. Required fields are marked *