Header Ads
Breaking News

ಬಡಗಬೆಟ್ಟಿನಲ್ಲಿ ವಾತ್ಸಲ್ಯ ಕೇಂದ್ರ ಬೆಂಗಳೂರು ಮೂಲದ ಸರೋಜಮ್ಮರಿಂದ ಉದ್ಘಾಟನೆ

ಬಡಗಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಮಸೀದಿಯ ಬಳಿ ಅನಾಥರು ಹಾಗೂ ನಿರ್ಗತಿಕರನ್ನು ಉಚಿತ ಊಟ, ಬಟ್ಟೆ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡಿ ಸಲಹುವ ಸದುದ್ದೇಶದಿಂದ ವಾತ್ಸಲ್ಯ ಕೇಂದ್ರ ಎಂಬ ಸಂಸ್ಥೆ ಉದ್ಘಾಟನೆಗೊಂಡಿದೆ. ನಿರ್ಗತಿಕರಾದ ಬೆಂಗಳೂರು ಮೂಲದ ಸರೋಜಮ್ಮನವರು ರಿಬ್ಬನ್ ಕತ್ತರಿಸುವುದರ ಮೂಲಕ ವಾತ್ಸಲ್ಯ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭ ವಾತ್ಸಲ್ಯ ಕೇಂದ್ರದ ವ್ಯವಸ್ಥಾಪಕರಾದ ಅನ್ಸಾರ್ ಅಹಮದ್, ಅಂಬಲಪಾಡಿ ರೋಟರಿ ಅಧ್ಯಕ್ಷರಾದ ಖಲೀಲ್ ಅಹ್ಮದ್, ಮಲಬಾರ್ ಗೋಲ್ಡ್ ನ ವ್ಯವಸ್ಥಾಪಕರಾದ ಹಫೀಝ್ ರೆಹಮಾನ್, ಮಾಜಿ ನಗರಸಭಾ ಸದಸ್ಯರಾದ ಹಿಲರಿ ಜತ್ತನ್ನ, ರಾಘವೇಂದ್ರ ಶೆಟ್ಟಿ, ಉದ್ಯಮಿ ಸಮೀರ್ ಅಹಮದ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *