Header Ads
Header Ads
Header Ads
Breaking News

ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಮಹಾಸಭೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಾಧಕರಿಗೆ ಸನ್ಮಾನ

ಆಂಕರ್: 99 ವರ್ಷಗಳನ್ನು ಪೂರೈಸಿ ಶತಮಾನೋತ್ಸವದ ಹೊಸ್ತಿಲಲ್ಲಿರುವ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿಯ ಮಹಾಸಭೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯಲ್ಲಿ ಲೆಕ್ಕಪತ್ರದ ಮಂಡನೆ, 2017-18 ಸಾಲಿನ ಅಯವ್ಯಯದ ಬಗ್ಗೆ ಅಂಗೀಕರ, ಸಂಘದ ಉಪನಿಬಂಧನೆಯ ತಿದ್ದುಪಡಿಯ ಬಗ್ಗೆ ಮಾಹಿತಿಯನ್ನು ಬ್ಯಾಂಕಿನ ಪ್ರದಾನ ವ್ಯವಸ್ಥಾಪಕ ಜಯಕರಶೆಟ್ಟಿ ಇಂದ್ರಾಳಿ ಮಾಹಿತಿ ನೀಡಿದರು.

ಇದೇ ಸಂದರ್ಬದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜಿಕ ಕಾರ್ಯಗಳ ಮೂಲಕ ಜನಮಾತನಾಗಿರುವ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಹಾಗೂ ಸದಾನಂದ ಕಾಂಚನ್ ಅವರನ್ನು ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ಮಹಾಸಭೆಯಲ್ಲಿ ಭಗವಹಿಸಿದ ಸಚಿವ ಪ್ರಮೋದ್ ಮದ್ವರಾಜ್ ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಬ್ಯಾಂಕ್ ಗೆ ಶುಭ ಹಾರೈಸಿದರು. ಸಮಾರಂಭದಲ್ಲಿ ಬ್ಯಾಂಕ್ ನ ಅಧ್ಯಕ್ಷ ಸಂಜೀವ ಕಾಂಚನ್, ಉಪಾಧ್ಯಕ್ಷ‌ಉಮಾನಾಥ್,ನಿರ್ದೇಶಕ ಪುರುಷೋತ್ತಮ ಶೆಟ್ಟಿ, ನಿರ್ದೇಶಕ ವಸಂತ ಕಾಮತ್, ಪದ್ಮನಾಭ ನಾಯಕ್,ಜಯಶೆಟ್ಟಿ, ಗಾಯತ್ರಿ ಭಟ್, ಸಹಕಾರಿ ಸಂಘದ ಉಪನಿಬಂಧಕಿ ಚಂದ್ರಪ್ರತಿಮಾ,ಕಿಶನ್ ಹೆಗ್ಡೆ ಕೊಳ್ಕೆ ಬೈಲು ಉಪಸ್ಥಿತಿದರಿದ್ದರು.

Related posts

Leave a Reply