Header Ads
Header Ads
Header Ads
Breaking News

ಬಡಗುಪೇಟೆ ನಿವಾಸಿಗಳಿಗೆ ಡ್ರೈನೇಜ್ ಕಾಟ ಉಡುಪಿ ನಗರಸಭೆಗೆ ದೂರಿತ್ತರೂ ಮರುತ್ತರವಿಲ್ಲ ಸಚಿವರ ಮೊರೆ ಹೋಗಲು ನಾಗರೀಕರ ನಿರ್ಧಾರ

ರಸ್ತೆಯಲ್ಲೇ ಹರಿಯುವ ಡ್ರೈನೇಜ್ ನೀರಿನಿಂದ ನಲುಗಿ ಹೋಗಿರುವ ಉಡುಪಿ ಬಡಗುಪೇಟೆ ನಿವಾಸಿಗಳು ಮತ್ತು ವ್ಯಾಪಾರಿಗಳು ಇದೀಗ ಸಚಿವರಿಗೆ ಪರಿಸ್ಥಿತಿ ಮನವರಿಕೆಗೆ ಮುಂದಾಗಿದ್ದಾರೆ. ಉಡುಪಿಯ ಬಡಗುಪೇಟೆಯ ನೋವೆಲ್ಟಿ ಜುವೆಲ್ಲರಿ ಎದುರು ಕಳೆದ ಮೂರು ತಿಂಗಳಿನಿಂದ ಹರಿಯುತ್ತಿರುವ ಡ್ರೈನೇಜ್ ನಿಂದಾಗಿ ದಾರಿ ಹೋಕರು, ವ್ಯಾಪಾರಿಗಳು, ಸ್ಥಳೀಯ ನಿವಾಸಿಗಳು ವಾಸಿಸದ ಪರಿಸ್ಥಿತಿಯಲ್ಲಿದ್ದಾರೆ.

ಪಾದಾಚಾರಿಗಳು ಮೂಗು ಮುಚ್ಚಿ ಸಾಗುವ ಪರಿಸ್ಥಿತಿಯಲ್ಲಿದ್ದು ಈ ಬಗ್ಗೆ ನಗರಸಭೆಗೆ ಮನವಿ ನೀಡಿ ಅಲ್ಲಿನ ವ್ಯಾಪಾರಸ್ಥರಿಗೆ ಸುಸ್ತಾಗಿ ಹೋಗಿದೆ. ಇದೀಗ ಸಚಿವ ಪ್ರಮೋದ್ ಮದ್ವರಾಜ್ ಗೆ ಮನವಿ ಸಲ್ಲಿಸಲು ಮುಂದಾಗಿದ್ದು ಈ ಮೂಲಕ ನಗರಸಭೆಯ ಆಡಳಿತದ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ. ನಗರಸಭೆ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದ್ದರೆ.

ವರದಿ:ಪಲ್ಲವಿ ಸಂತೋಷ್

Related posts

Leave a Reply