Header Ads
Header Ads
Breaking News

ಸಾಕಲಾಗದ ಐದು ಕರುಳಕುಡಿಗಳ ತ್ಯಜಿಸಿದಳು ತಾಯಿ : ಸಮಾಜಸೇವಕರು, ಇಲಾಖೆಯಿಂದ ರಕ್ಷಣೆ

 ಹೆತ್ತಬ್ಬೆಯೊಬ್ಬಳು ತನ್ನ ಐವರು ಸಣ್ಣ ಮಕ್ಕಳನ್ನು ಸಾಕಲು ಅಸಹಾಯಕತೆ ಎದುರಾಗಿ, ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಮಕ್ಕಳನ್ನು ಬಿಟ್ಟು ಹೋಗವ ಯತ್ನದಲ್ಲಿರುವಾಗ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸೇವಾಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಮಕ್ಕಳನ್ನು ರಕ್ಷಿಸಿದ್ದಾರೆ. ನಂತರ ಸಂಬಂಧಪಟ್ಟ ಮಕ್ಕಳ ಕಲ್ಯಾಣ ಸಮಿತಿ, ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಶಕ್ಕೆ ನೀಡಿದ ಮಾನವೀಯತೆ ಮೆರೆದಿದ್ದಾರೆ. ನಾಗರಿಕ ಸಮಿತಿಯ ಕಾರ್ಯಕರ್ತರ ಸಮಯಪ್ರ, ಕಾನೂನು ಪರಿವಿಕ್ಷಣಾ ಅಧಿಕಾರಿ ಪ್ರಭಾಕರ್ ಆಚಾರ್ಯ, ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಮೋಹನ್ ಕುಮಾರ್ ಅವರ ಕರ್ತವ್ಯ ಪ್ರಜ್ಞೆಯಿಂದ, ಬೀದಿ ಪಾಲಾಗಬೇಕಾದ ಮೂವರು ಹೆಣ್ಣು, ಎರಡು ಗಂಡು ಮಕ್ಕಳು ಸುರಕ್ಷಿತರಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳ ರಕ್ಷಣಾ ಕಾರ್ಯಚರಣೆಗೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ರಕ್ಷಿಸಲ್ಪಟ್ಟ ಮಕ್ಕಳು ಸಾವಿತ್ರಿ (10ವ) ಮಲ್ಲಮ್ಮ(9 ವ) ಎಮ್ಮೂನೂರ್ (5 ವ) ಮರಿಯಮ್ಮ(4 ವ) ಪ್ರಶಾಂತ್ (2 ವ) ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವಿಕ್ಷಣಾ ಅಧಿಕಾರಿ ಪ್ರಭಾಕರ್ ಆಚಾರ್ಯ ಅವರು ಕಾನೂನು ಪ್ರಕ್ರಿಯೆ ನಡೆಸಿದ ಬಳಿಕ, ಕುಂದಾಪುರದ ನಮ್ಮ ಭೂಮಿ ಸಂಸ್ಥೆಯಲ್ಲಿ ನೆಲೆ ಕಲ್ಪಿಸಿದ್ದಾರೆ.

Related posts

Leave a Reply

Your email address will not be published. Required fields are marked *