Header Ads
Header Ads
Header Ads
Breaking News

ಬಡಮಕ್ಕಳ ವಿದ್ಯಾರ್ಜನೆಗಾಗಿ ಹುಲಿವೇಷ ಹಾಕಿ ಹೆಜ್ಜೆ ಹಾಕಿದ ಯುವಕರು ಅದಮಾರು ಓಂ ಪ್ರೇಂಡ್ಸ್ ಹಾಗೂ ಅಂಬೇಡ್ಕರ್ ಸೇವಾ ಸಮಿತಿಯ ದಿಟ್ಟ ಹೆಜ್ಜೆ

ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಹಾಗೂ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವು ನೀಡುವ ನಿಟ್ಟಿನಲ್ಲಿ, ಅದಮಾರು ಓಂ ಪ್ರೇಂಡ್ಸ್ ಹಾಗೂ ಅಂಬೇಡ್ಕರ್ ಸೇವಾ ಸಮಿತಿ ಸದಸ್ಯರು ಹುಲಿವೇಷ ಹಾಕಿ, ಅದರಿಂದ ಒಟ್ಟು ಸೇರುವ ಹಣದ ಒಂದು ಪೈಸೆಯೂ ದುರುಪಯೋಗ ಆಗದಂತೆ ಅರ್ಹರಿಗೆ ನೆರವು ನೀಡುವ ಉದ್ಧೇಶದಿಂದ ಹಾಕಿಕೊಂಡ ಯುವಕರ ಈ ದಿಟ್ಟ ಹೆಜ್ಜೆಗೆ, ಗ್ರಾಮಸ್ಥರಿಂದ ಬಾರೀ ಶ್ಲಾಘನೆ ವ್ಯಕ್ತವಾಗಿದೆ.

ಮಾತೃ ಸಂಸ್ಥೆಯ ಮುಖ್ಯಸ್ಥರೋರ್ವರಾದ ಸುದಾನಂದ ಮಾತನಾಡಿ, ಐವತ್ತಕ್ಕಿಂತಲೂ ಅಧಿಕ ಸದಸ್ಯ ಬಲವನ್ನು ಹೊಂದಿರುವ ಈ ಸಂಸ್ಥೆ ಹಲವಾರು ಸಮಜೋಮುಖಿ ಕಾರ್ಯವನ್ನು ನಡೆಸಿಕೊಂಡು ಬಂದಿದ್ದು, ಇದೀಗ ಸಮಾಜಸೇವೆಗೆ ಮತ್ತೊಂದು ಆಯಾಮವನ್ನು ಕಂಡುಕೊಂಡ ನಮ್ಮ ಸಂಸ್ಥೆಯ ಸದಸ್ಯರು, ಹುಲಿವೇಷ ಧರಿಸುವ ನಿರ್ಧಾರಕ್ಕೆ ಮುಂದಾಗಿ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಇದರಿಂದ ಒಟ್ಟು ಸೇರುವ ಹಣವನ್ನು ನಮ್ಮ ಉದ್ಧೇಶದಂತೆ ಬಡಮಕ್ಕಳ ಶ್ರೇಯಾಭಿವೃದ್ಧಿಗೆ ಉಪಯೋಗಿಸಲಾಗುವುದೆಂದರು.


ಸ್ಥಳೀಯರಾದ ನಾಗರಾಜ್ ಶೆಟ್ಟಿ ಕುಂಜೂರು ಮಾತನಾಡಿ, ನಮ್ಮ ಕಣ್ಣಮುಂದೆ ಹುಟ್ಟಿಕೊಂಡ ಈ ಅವಳಿ ಸಂಸ್ಥೆಗಳ ಸದಸ್ಯರು ಬಹಳಷ್ಟು ಸಮಾಜದ ಬಗ್ಗೆ ಕಳಕಳಿ ಹೊಂದಿದ್ದು, ಇದೀಗ ಸ್ವಾರ್ಥ ರಹಿತವಾಗಿ ತಮ್ಮೇಲ್ಲಾ ಕೆಲಸವನ್ನು ಬದಿಗೊತ್ತಿ, ನವರಾತ್ರಿಯ ಅಂತಿಮ ಎರಡು ದಿನಗಳಲ್ಲಿ ಹುಲಿವೇಷ ಹಾಕಿ ಹಣ ಹೊಂದಿಸಿ ಅದರಿಂದ ಬಡವರ ಸೇವೆ ಮಾಡಲು ಮುಂದಾಗಿದ್ದು ನಮ್ಮ ಗ್ರಾಮಕ್ಕೆ ಸಂದ ಗೌರವವಾಗಿದೆ. ಇವರ ಈ ಉತ್ತಮ ಕಾರ್ಯಕ್ಕೆ ಗ್ರಾಮಸ್ಥರಾದ ನಾವು ಉತ್ತೇಜನ ನೀಡಲಿದ್ದೇವೆ ಎಂದರು

ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುಲಿವೇಷಧಾರಿಗಳನ್ನು ಬೀಳ್ಕೋಡಲಾಯಿತು. ಈ ಸಂಧರ್ಭ ಗ್ರಾಮಸ್ಥರಾದ ಸಂತೋಷ್ ಶೆಟ್ಟಿ ಕುಂಜೂರು, ಉದಯ ಕುಮಾರ್ ಅದಮಾರ್, ಸಂತೋಷ್ ಶೆಟ್ಟಿ ಬರ್ಪಣಿ ಮುಂತಾದವರು ಉಪಸ್ಥಿತರಿದ್ದರು.

ವರದಿ-ಸುರೇಶ್ ಎರ್ಮಾಳು

Related posts

Leave a Reply