Header Ads
Header Ads
Breaking News

ಬಡವರನ್ನು ದಾರಿ ತಪ್ಪಿಸುವ ಕೆಲಸ ಗಿರಿಧರ್ ನಾಯ್ಕ್ ಮಾಡ್ತಿದ್ದಾರೆ:ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಹೇಳಿಕೆ

ಡಿ.ಸಿ ಮನ್ನಾ ಭೂಮಿಯ ವಿಚಾರದಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಗಿರಿಧರ್ ನಾಯ್ಕ್ ಮೊದಲೇ ದಲಿತ ಸಂಘಟನೆಗಳು ಹೋರಾಟ ನಡೆಸಿದೆ ಎಂದು ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಹೇಳಿದರು.2008 ರಲ್ಲಿ ದಲಿತ ಸೇವಾ ಸಮಿತಿ ವಿಟ್ಲದಿಂದ ಮಂಗಳೂರು ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದೆ. ಬಡ ಕುಟುಂಬಗಳನ್ನು ದಾರಿತಪ್ಪಿಸುವ ಕೆಲಸವನ್ನು ಗಿರಿಧರ್ ನಾಯ್ಕ್ ಮಾಡುತ್ತಿದ್ದಾರೆ.ಆರ್ಯಾಪುವಿನಲ್ಲಿ ಸ್ಥಳೀಯರು ಡಿಸಿ ಮನ್ನಾ ಭೂಮಿಯಲ್ಲಿ ಹಾಕಿದ ಟೆಂಟನ್ನು ತೆರವುಗೊಳಿಸಲು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ್ ಅಧ್ಯಕ್ಷರಿಗೆ ಪುತ್ತೂರು ತಹಶಿಲ್ದಾರ್ ಸೂಚಿಸಿದ್ದಾರೆ ಎನ್ನುವ ವಿಚಾರವನ್ನು ಸ್ವತಹ ಗಿರಿಧರ್ ನಾಯ್ಕ್ ಸಾರ್ವಜನಿಕವಾಗಿ ಹೇಳುತ್ತಿದ್ದು, ಈ ಬಗ್ಗೆ ತಹಶಿಲ್ದಾರ್ ಶನಿವಾರದ ಮೊದಲು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ತಪ್ಪಿದಲ್ಲಿ ತಹಶಿಲ್ದಾರ್ ವಿರುದ್ಧ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿ ಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು. ಕೇವಲ ಹಣ ಮಾಡುವ ಉದ್ಧೇಶದಿಂದ ಗಿರಿಧರ್ ನಾಯ್ಕ್ ಬಡ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಅಯಾ ಗ್ರಾಮದಲ್ಲಿರುವ ಡಿಸಿ ಮನ್ನಾ ಭೂಮಿಯನ್ನು ಭೂ ರಹಿತರಿಗೆ ನೀಡಬೇಕೆಂದು ಒತ್ತಾಯಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

Related posts

Leave a Reply