Header Ads
Header Ads
Breaking News

ಬಡವರ ಪರ ನಿಂತರೆ ಮಧ್ಯವರ್ತಿ ಪಟ್ಟ:  ಮಹೇಶ್ ರೈ ಮೇನಾಲ ಅಸಮಾಧಾನ

ಸುಳ್ಯ: ಗ್ರಾಮ ಪಂಚಾಯತ್‌ಗೆ ಬರುವ ಬಡವರ, ಅಸಾಯಕರ ಪರ ಸಾಮಾಜಿಕವಾಗಿ ಗುರಿತಿಸಿಕೊಳ್ಳುವ ನಾವು ಮಾತನಾಡಿದರೆ ಮದ್ಯವರ್ತಿ ಎಂಬ ಪಟ್ಟ ಕಟ್ಟುವುದು ಸರಿಯಲ್ಲ.ಇದಕ್ಕೆ ಗ್ರಾ.ಪಂ. ಸ್ಪಷ್ಟನೆ ನೀಡದಿದ್ದರೆ, ಕಾನೂನು ಹೋರಾಟ ನಡೆಸುವುದಾಗಿ ಬಿಜೆಪಿಯ ಮಹೇಶ್ ರೈ ಮೇನಾಲ ಹೇಳಿದ್ದಾರೆ.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆನಂದ ತುದಿಯಡ್ಕ ಎಂಬವರು ಆಧಾರ್ ವರ್ಗಾವಣೆಗೆ ದೃಢೀಕರಣಕ್ಕಾಗಿ ಪಂಚಾಯಿತಿಗೆ ಹೋದಾಗ ಪಿ.ಡಿ.ಒ. ಅವರನ್ನು 15ದಿವಸಗಳಿಂದ ಸತಾಯಿಸಿದ್ದರು. ಆನಂದರು ಈ ವಿಷಯ ನಮ್ಮ ಬಳಿ ಹೇಳಿದಾಗ ನಾವು ಅವರ ಜತೆ ಹೋಗಿ ಪಂಚಾಯಿತಿನಲ್ಲಿ ಮಾತನಾಡಿzವೆ. ಪಿ.ಡಿ.ಒ.ಗೆ ಬೇಕಾದ ಎಲ್ಲ ದಾಖಲೆ ನೀಡಿದರೂ ಸತಾಯಿಸುತ್ತಿರುವುದನ್ನು ಪ್ರಶ್ನಿಸಿರುವೆ. ಪಂಚಾಯಿತಿಗೆ ಆ ವೇಳೆಗೆ ಬಂದ ತಾ.ಪಂ. ಅಧ್ಯಕ್ಷರು ಕೂಡಾ ಕಾನೂನಿನಲ್ಲಿ ಅವಕಾಶ ಇದ್ದರೆ ಕೊಡಿ ಎಂದು ಹೇಳಿದ್ದರು. ಅದೇ ದಿನ ಪಂಚಾಯಿತಿಗೆ ಬಂದ ಇ.ಒ.ರವರು ಕೂಡಾ ಪರಿಶೀಲಿಸಿ, ದಾಖಲೆ ಸರಿಯಾಗಿದ್ದರೆ ಕೊಡಿ ಎಂದು ಹೇಳಿದ್ದರು. ಆದರೆ ಪಿ.ಡಿ.ಒ. ಕೊಡುತ್ತೇವೆಂದೂ-ಕೊಡುವುದಿಲ್ಲ ಎಂದು ಎರಡನ್ನು ಹೇಳದಿದ್ದಾಗ ನಾವು ಒತ್ತಾಯ ಮಾಡಿದೆವು. ಬಳಿಕ ನಾಳೆ ಗ್ರಾಮ ಸಭೆಯಲ್ಲಿ ಕೊಡುವುದಾಗಿ ಹೇಳಿದರು. ಅಲ್ಲಿಯೂ ನಾವು ಪ್ರಸ್ತಾಪ ಮಾಡಿ, ನಮ್ಮ ಮಾತಿನಲ್ಲಿ ನ್ಯಾಯ ಇದ್ದದನ್ನು ಅರಿತ ನೋಡೆಲ್ ಅಧಿಕಾರಿಯವರು ಕೂಡಾ ಕೊಡುವಂತೆ ಹೇಳಿ, ಬಳಿಕ ನಮಗೆ ಧೃಡೀಕರಣ ಕೊಟ್ಟಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ನಮಗೆ ಮದ್ಯವರ್ತಿ ಎಂಬ ಪಟ್ಟ ಕಟ್ಟಿರುವುದು ಸರಿಯಲ್ಲ. ಇದನ್ನು ಗ್ರಾಮಸ್ಥರು ಖಂಡಿಸಿದ್ದಾರೆ ಎಂದು ಮಹೇಶ್ ರೈ ವಿವರ ನೀಡಿ, ನಾವು ಬೆದರಿಕೆ ನೀಡಿಲ್ಲ. ಬಡವರ ಪರ ಮಾತನಾಡಿರುವೆ ಅಷ್ಟೆ. ಅದನ್ನು ಇನ್ನೂ ಮುಂದುವರಿಸುತ್ತೇವೆ. ಗ್ರಾಮ ಸಭೆಯಲ್ಲಿ ನಮ್ಮ ಹಕ್ಕಿನ ಕುರಿತು ಕೇಳುವುದನ್ನು ತಡೆಯಲು ಯಾರಿಂದಲೂ ಸಾಧ್ಯ ಇಲ್ಲ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ಬಂಟ್ರಬೈಲು, ವೆಂಕಟ್ರಮಣ ಮುಳ್ಯ, ಸೀತಾರಾಮ ಶಾಂತಿಮಜಲು ಇದ್ದರು.
ವರದಿ: ಪದ್ಮನಾಭ ಸುಳ್ಯ

Related posts

Leave a Reply

Your email address will not be published. Required fields are marked *