Header Ads
Breaking News

ಬಡವರ ಪಾಲಿನ ದಿನೇಶ್ ಬೀಡಿಯ ಸುವರ್ಣ ಮಹೋತ್ಸವ : ಮಂಜೇಶ್ವರ ಹಾಗೂ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮ

ಮಂಜೇಶ್ವರದ ಕಾರ್ಮಿಕ ನೇತಾರರಾದ ಹಾಗು ಮಾಜಿ ಸಚಿವರಾದ ಡಾ. ಎ ಸುಬ್ಬರಾವ್ ಹಾಗೂ ಬಿ ಎಂ ರಾಮಯ್ಯ ಶೆಟ್ಟಿ ಇವರ ಮುಂದಾಳತ್ವದಲ್ಲಿ ಮಂಜೇಶ್ವರದಲ್ಲಿ ದಿನೇಶ್ ಬಿಡಿ ಸಂಸ್ಥೆ ಅಸ್ಥಿತ್ವಕ್ಕೆ ಬಂದು ಅದೇಷ್ಟೋ ಬಡವರು ಕೆಲಸಗಿಟ್ಟಿಸಿಕೊಂಡಿದ್ದರು.ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮದಂಗವಾಗಿ ಮಂಜೇಶ್ವರದ ಹಾಗು ಜಿಲ್ಲೆಯ ವಿವಿಧೆಡೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

1969 ಮಾರ್ಚ್ 10 ಕ್ಕೆ ಕೇರಳದ ಅಂದಿನ ಎಡರಂಗ ಸರಕಾರದ ಮುತುವರ್ಜಿಯಲ್ಲಿ ಅದರಲ್ಲಿ ಅದೆಷ್ಟೋ ಬಡವರು ಕೆಲಸವನ್ನು ಗಿಟ್ಟಿಸಿಕೊಂಡು ಬದುಕು ಸಾಗಿಸಿದ್ದಾರೆ. ದಿನೇಶ್ ಬೀಡಿ ಸುವರ್ಣ ಜ್ಯುಬಿಲಿಯ ಭಾಗವಾಗಿ ಮಂಜೇಶ್ವರ ದಿನೇಶ್ ಬಿಡಿ ಸಂಸ್ಥೆಯ ಮುಂಭಾಗದಿಂದ ಮಂಜೇಶ್ವರ ಪ್ರೈಮರಿ ಸೊಸೈಟಿ ಮುಖ್ಯ ಕಚೇರಿ ತನಕ ಘೋಷ ಯಾತ್ರೆ ನಡೆಸಲಾಯಿತು. ಈ ಸಂದರ್ಭ ಎ.ಕೆಎಂ ಅಶ್ರಫ್, ಬೇಬಿ ಶೆಟ್ಟಿ, ಜನಪ್ರತಿನಿಧಿನಿಧಿಗಳಾದ ಶಂಸಾದ್ ಶುಕೂರ್ , ನೇತಾರರಾದ ಅಜಿತ್ ಕುಮಾರ್, ಪ್ರಶಾಂತ್ ಕನಿಲ, ಸಿ ಕೆ ಬಾಲಕೃಷ್ಣ , ಭಾರತಿ ಜಿ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *