Header Ads
Header Ads
Breaking News

ಮುಜರಾಯಿ ದೇವಸ್ಥಾನಗಳಲ್ಲಿ ಬಡವರ ಸಾಮೂಹಿಕ ವಿವಾಹದ ಹೊಸ ಯೋಜನೆ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ

 ಬಿಜೆಪಿ ನೇತೃತ್ವದ ಸರ್ಕಾರ ಮುಜುರಾಯಿ ದೇವಸ್ಥಾನಗಳಲ್ಲಿ ಬಡವರಿಗೆ ಸಾಮೂಹಿಕ ವಿವಾಹವಾಗಲು ಹೊಸ ಯೋಜನೆ ಜಾರಿಗೆ ತರುವ ಚಿಂತನೆ ತಂದಿದೆ. ಈ ಮೂಲಕ ಬಡ ಹಿಂದೂಗಳ ವಿವಾಹಕ್ಕೆ ನೆರವಾಗುವ ಈ ಯೋಜನೆ ತರುವ ಚಿಂತನೆ ಮೂಲಕ ಹೊಸ ಅಧ್ಯಾಯ ಬರೆಯಲು ಮುಂದಾಗಿದೆ.

ಬಡ ಹಿಂದೂಗಳ ವಿವಾಹಕ್ಕೆ ರಾಜ್ಯ ಸರ್ಕಾರ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ. ಮುಜರಾಯಿ ಇಲಾಖೆಯ ಮೂಲಕ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ಎಲ್ಲಾ ಸಿದ್ದತೆ ನಡೆದಿದೆ. ದೇವಾಲಯಗಳ ನಗರಿ ಉಡುಪಿಯಿಂದ ಆಯ್ಕೆಯಾದ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಹೊಸ ಕಾನ್ಸೆಪ್ಟ್ ಜಾರಿಯ ಉತ್ಸಾಹದಲ್ಲಿದ್ದಾರೆ. ಸದ್ಯ ಈ ಯೋಜನಗೆ ಯಾವುದೇ ಹೆಸರಿಟ್ಟಿಲ್ಲ. ಆದ್ರೆ ಈ ವರ್ಷದಿಂದಲೇ ಈ ಸರಳವಿವಾಹ ಯೋಚನೆ ಕಾರ್ಯರೂಪಕ್ಕೆ ಬರಲಿದೆ.
ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ವರಮಾನ ಬರುವ ಎ ಗ್ರೇಡ್‌ಗೆ ಬರುವ, 190 ದೇವಸ್ಥಾನಗಳಿವೆ. ಕರಾವಳಿಯಲ್ಲಿ ರಾಜ್ಯದಲ್ಲೇ ಅತೀಹೆಚ್ಚು ವರಮಾನ ಬರುವ ಅನೇಕ ದೇವಸ್ಥಾನಗಳಿವೆ. ಹಾಗಾಗಿ ಕರಾವಳಿ ಮೂಲದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಈ ಯೋಜನೆ ಜಾರಿಯ ಬಗ್ಗೆ ಸನೇಕ ಕನಸುಗಳಿವೆ. 25 ಲಕ್ಷದಿಂದ 100 ಕೋಟಿಯ ವರಗೆ ವರಮಾನ ಬರುವ ದೇವಸ್ಥಾನಗಳಲ್ಲಿ ಈ ಸಾಮೂಹಿಕ ವಿವಾಹಕ್ಕೆ ಅವಕಾಶವಿದೆ. ಈಗಾಗಲೇ ಈ ಯೋಜನೆ ಕಾರ್ಯರೂಪಕ್ಕೆ ತರಲು ಓರ್ವ ಅಧಿಕಾರಿಯ ನೇಮಕವೂ ಆಗಿದೆ. ಜಿಲ್ಲಾವಾರು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಬಡತನವೇ ಈ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಲು ಮಾನದಂಡ. ವಧು ವರರಿಗೆ ಬೇಕಾದ ಸಾಂಪ್ರದಾಯಿಕ ಬಟ್ಟೆಬರೆ ಹಾಗೂ ತಾಳಿಯನ್ನು ಸರ್ಕಾರವೇ ನೀಡುತ್ತೆ.ಅಥವಾ ಆಯಾ ದೇವಸ್ಥಾನಗಳ ಮೂಲಕವೂ ಖರ್ಚು ಭರಿಸುವ ಚಿಂತನೆಯೂ ಇದೆ ಅಂತಾರೆ ಮುಜುರಾಯಿ ಸಚಿವರು. ಈ ವರ್ಷದಿಂದಲೇ ಸಾಮೂಹಿಕ ವಿವಾಹ ಯೋಜನೆ ಜಾರಿಯಾಗಲಿದೆ. ಮೊದಲ ಹಂತದಲ್ಲಿ ಸುಮಾರು ನೂರು ದೇವಸ್ಥಾನಗಳಲ್ಲಿ, ಒಂದು ಸಾವಿರ ಜೋಡಿಗಳ ವಿವಾಹಕ್ಕೆ ಸಿದ್ದತೆ ಮಾಡಲಾಗುತ್ತಿದೆ. ಈ ಸಂಖ್ಯೆ ದುಪಟ್ಟಾದರೂ ಸರ್ಕಾರ ವೆಚ್ಚ ಭರಿಸಲಿದೆಯಂತೆ. ಶ್ರೀ ಕ್ಷೇತ್ರ ಕೊಲ್ಲೂರು ಈಗಾಗಲೇ ಸಾಮೂಹಿಕ ವಿವಾಹ ಮಾಡಿಸಲು ಸಮ್ಮತಿ ಸೂಚಿಸಿದ್ದು ಸುಮಾರು 200 ಜೋಡಿಗಳನ್ನು ನೋಂದಾಯಸುವ ಭರವಸೆಯನ್ನೂ ನೀಡಿದೆ. ಕರಾವಳಿಯ ಕೊಲ್ಲೂರು, ಕಟೀಲು, ಸುಬ್ರಹ್ಮಣ್ಯ ಮುಂತಾದ ದೇವಸ್ಥಾಗಳಲ್ಲಿ ಪ್ರಾಯೋಗಿಕವಾಗಿ ಸಾಮೂಹಿಕ ವಿವಾಹ ನಡೆಸುವ ಸಾಧ್ಯತೆ ಇದೆ. ಧರ್ಮಸ್ಥಳ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯುವ ಸಾಮೂಹಿಕ ವಿವಾಹದ ಮಾದರಿಯಲ್ಲೇ ಸರ್ಕಾರದ ಈ ಯೋಜನೆ ಜಾರಿಯಾಗುತ್ತೆ ಅನ್ನೋದು ಸಚಿವರ ವಿಶ್ವಾಸ.

Related posts

Leave a Reply

Your email address will not be published. Required fields are marked *