Header Ads
Header Ads
Breaking News

ಬಡಾ ಎರ್ಮಾಳಿನಲ್ಲಿ ತೀವೃಗೊಂಡ ಕಡಲು ಕೊರೆತ..

ಪ್ರತೀ ವರ್ಷದಂತೆ ಈ ಬಾರಿಯೂ ಬಡಾ ಎರ್ಮಾಳಿನಲ್ಲಿ ಕಡಲು ಕೊರೆತ ತೀವೃಗೊಂಡಿದ್ದು, ಬಹಳಷ್ಟು ತೆಂಗಿನ ಮರಗಳು ಕಡಲ ಒಡಲು ಸೇರಿದ್ದು ಮೀನುಗಾರಿಕ ರಸ್ತೆ ಸಹಿತ ಸ್ಥಳೀಯ ಮೂರು ಮನೆಗಳು ಅಪಾಯದಂಚಿನಲ್ಲಿದೆ.

ಕಡಲು ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕರಾವಳಿ ಭಾಗದ ಕಠಿಣ ಸಮಸ್ಯೆಯಾದ ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗುತ್ತಿದ್ದು, ಇದೀಗ ಪಡುಕೆರೆ-ಉದ್ಯಾವರ ಪ್ರದೇಶದಲ್ಲಿ ವಿಭಿನ್ನ ರೀತಿಯ ತಡೆಗೋಡೆ ನಿರ್ಮಿಸಲು ಮುಂದಾಗಿದ್ದು, ಅದು ಯಶಸ್ವಿಯಾದರೆ ಎಲ್ಲಾ ಕಡೆಗಳಲ್ಲೂ ಅದೇ ಮಾದರಿ ಕಾಮಗಾರಿ ನಡೆಸ ಬಹುದಾಗಿದೆ. ಅಲ್ಲದೆ ಬಡ ಎರ್ಮಾಳು ಪ್ರದೇಶಕ್ಕೆ ಇಷ್ಟರಲ್ಲೇ ಎಡಿಬಿ ಯೋಜನೆಯಡಿಯಲ್ಲಿ ಶಾಶ್ವತ ತಡೆಗೋಡೆಗೆ ಯೋಜನೆ ರೂಪುಗೊಂಡಿದ್ದು, ಮಳೆಗಾಲ ಮುಗಿಯುತ್ತಿದಂತೆ ಚಾಲನೆ ದೊರೆಯಲಿದೆ, ಇದೀಗ ಮೀನುಗಾರೀಕ ರಸ್ತೆಗೆ ಅಪಾಯವಿರುವ ಹಿನ್ನಲೆಯಲ್ಲಿ ಇದೀಗ ರಾತ್ರಿ ಹೊತ್ತಲ್ಲೇ ತಾತ್ಕಾಲಿಕ ತಡೆಗೋಡೆ ನಿರ್ಮಾಣಕ್ಕಾಗಿ ಕಲ್ಲು ಹಾಕುವ ಕೆಲಸ ನಡೆಸಲಾಗುವುದೆಂದರು. ಸ್ಥಳಕ್ಕೆ ಜಿ.ಪಂ. ಸದಸ್ಯೆ ಶಿಲ್ಪ ಸುವರ್ಣ, ಉಡುಪಿ ಹಾಗೂ ಕಾಪು ತಹಶೀಲ್ದಾರ್‌ಗಳು ಆಗಮಿಸಿ ಸ್ಥಳೀಯರಿಗೆ ಧೈರ್ಯ ತುಂಬುವ ಕಾರ್ಯಾ ನಡೆಸಿದ್ದಾರೆ.
ವರದಿ-ಸುರೇಶ್ ಎರ್ಮಾಳ್

Related posts

Leave a Reply