Header Ads
Breaking News

ಬಡಿಗೆಯಿಂದ ತಲೆಗೆ ಬಡಿದು ತಂದೆಯನ್ನೇ ಕೊಲೆ ಮಾಡಿದ ಮಗ

ತಂದೆಯನ್ನು ಬಡಿಗೆಯಿಂದ ತಲೆಗೆ ಬಡಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಶ್ರೀಧರ ಎಂಬ ವ್ಯಕ್ತಿಯನ್ನು ಮಗ ಹರೀಶ್ ಎಂಬಾತ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ. ಕೊಲೆಗೆ ಕೌಟುಂಬಿಕ ಕಾರಣ ಎನ್ನಲಾಗಿದ್ದು ಅಲ್ಲದೆ ಆರೋಪಿಗೆ ಕುಡಿಯುವ ಚಟವಿತ್ತು ಎನ್ನಲಾಗಿದೆ.ಕೊಲೆಯ ವಿಷಯ ಕೇಳಿ ಬಂದ ಕೂಡಲೇ ಊರವರು ಕೊಲೆಗಾರನನ್ನು ಹಿಡಿದು ಕಟ್ಟಿಹಾಕಿ ಪೊಲೀಸ್ರಿಗೆ ಆರೋಪಿಯನ್ನು ಒಪ್ಪಿಸಿದರು. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ ಮತ್ತು ಬಳಗದವರು ಧಾವಿಸಿ ಸ್ಥಳ ಮಹಜರು ನಡೆಸಿ ತನಿಖೆಯನ್ನು ನಡೆಸುತ್ತಿದ್ದಾರೆ

Related posts

Leave a Reply

Your email address will not be published. Required fields are marked *