Header Ads
Header Ads
Breaking News

ಬಡ್ಡಕಟ್ಟೆ ಹೊಸ್ಮಾರು ಸೇತುವೆ ಪುನರ್ ನಿರ್ಮಾಣ.ಜನ ಸಂಚಾರಕ್ಕೆ ಮುಕ್ತವಾದ ಸೇತುವೆ.

ಬಂಟ್ವಾಳ: ಕಳೆದ ಜೂ.19ರಂದು ಮಳೆಗೆ ಮುರಿದು ಬಿದ್ದಿದ್ದ ಪುರಸಭಾ ವ್ಯಾಪ್ತಿಯ ೫ನೇ ವಾರ್ಡ್‌ನ ಬಡ್ಡಕಟ್ಟೆ-ಹೊಸ್ಮಾರು ಸಂಪರ್ಕಿಸುವ ಕಿರು ಸೇತುವೆಯನ್ನು ಪುನರ್ ನಿರ್ಮಿಸಲಾಗಿದ್ದು ಜನ ಸಂಚಾರಕ್ಕೆ ಸೋಮವಾರ ಮುಕ್ತಗೊಳಿಸಲಾಯಿತು. ಧಾರಾಕಾ ಮಳೆಗೆ ಕಿರು ಸೇತುವೆಯ ಒಂದು ಭಾಗದ ಆಧಾರ ಸ್ಥಂಬ ತೋಡಿನ ನೀರಿನಲ್ಲಿ ಕೊಚ್ಚಿಹೋಗಿದ್ದು ಪರಿಣಾಮ ಕಿರು ಸೇತುವೆ ಕುಸಿದು ಬಿದ್ದಿತ್ತು. ಇದರಿಂದ ಹೊಸ್ಮಾರು ಹಾಗೂ ಬಡ್ಡಕಟ್ಟೆ ಮಧ್ಯೆ ಸಂಚಾರದ ಸಂಪರ್ಕ ಕೊಂಡಿ ಕಳಚಿ ಹೋಗಿತ್ತು. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರು ಈ ಸೇತುವೆಯನ್ನು ಅವಲಂಬಿಸುತ್ತಿದ್ದು ತೊಂದರೆ ಪಡುವಂತಾಗಿತ್ತು. ಪುರಸಭೆಯ ನಿಧಿಯಿಂದ ಮುರಿದು ಬಿದ್ದ ಜಾಗದಲ್ಲಿ ಕಬ್ಬಿಣದ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸಂದರ್ಭ ಸ್ಥಳೀಯ ಪುರಸಭಾ ಸದಸ್ಯ ಪ್ರವೀಣ್ ಬಿ. ಇಂಜಿನೀಯರ್ ಡೊಮೆನಿಕ್ ಡಿಮೆಲ್ಲೋ, ಯತೀಶ್ ಕರ್ಕೆರಾ ಮತ್ತು ಸ್ಥಳೀಯರು ಹಾಜರಿದ್ದರು.

Related posts

Leave a Reply