Header Ads
Breaking News

ಬಡ ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು

ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕೆಲಸ ಮುಗಿಸಿ ಮನೆಗೆ ಹೋಗಲು ರಸ್ತೆ ಬದಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಡ ಎರ್ಮಾಳು ಕಲ್ಯಾಣಿ ಬಾರ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟಿಸಿದೆ. ತೆಂಕ ಎರ್ಮಾಳು ಸರ್ಕಾರಿ ಶಾಲೆಯ ಪಕ್ಕದ ಬಾಡಿಗೆ ಮನೆ ನಿವಾಸಿ ವಿಶ್ವನಾಥ ಪೂಜಾರಿ(55) ಮೃತ ವ್ಯಕ್ತಿ. ಮೃತರು ಬಡ ಎರ್ಮಾಳಿನ ಕಲ್ಯಾಣಿ ಬಾರೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ಈ ದಿನದ ತನ್ನ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ವೇಗವಾಗಿ ಆಗಮಿಸಿದ ಫಾರ್ಚುನರ್ ಕಾರು ಡಿಕ್ಕಿಯಾಗಿದೆ. ಇಬ್ಬರು ಮಕ್ಕಳನ್ನು ಹೊಂದಿರುವ ಇವರು ಪತ್ನಿ ಸಹಿತ ಓರ್ವ ಮಗಳೊಂದಿಗೆ ಶಾಲೆ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಶಾಲೆಯ ಸಮೀಪದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಇದೀಗ ಮನೆ ಯಜಮಾನನ ಸಾವಿನಿಂದ ಕುಟುಂಬ ತತ್ತರಿಸಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *